ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ ಪತಿ ಬಿಟ್ಟು ಹೋದ ಕಾರಣ ತಾನೇ ದುಡಿದು ತನ್ನ ಮಗಳನ್ನು ಸಾಕುತ್ತಿದ್ದಳು. ಆದರೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಬ್ಬರು ಅದನ್ನು ವಿಡಿಯೋ ಮಾಡಿಕೊಂಡು ಹೆದರಿಸಿ ಆಕೆಯ ಮೇಲೆ ನಿರಂತರವಾಗಿ 2 ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆದರೆ ಈಗ ಆಕೆಯ ಮಗಳನ್ನು ಕರೆತರಲು ಬೆದರಿಕೆ ಹಾಕುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.