ಸಹೋದರ ಮತ್ತು ಅಮ್ಮನ ಜತೆ ಜಗಳವಾಡಿಕೊಂಡು ದೆಹಲಿಗೆ ಬಂದಿದ್ದ ಬಾಲಕಿ, ಕೋಪ ಇಳಿದ ಮೇಲೆ ಅಲ್ಲಿಂದ ಮತ್ತೆ ಮನೆಗೆ ಹಿಂತಿರುಗುವಾಗ ರೈಲಿನಲ್ಲಿ ಆಕೆಗೆ ಒಬ್ಬರ ಪರಿಚಯವಾಗಿದೆ. ನಿನಗೆ ಸಹಾಯ ಮಾಡುತ್ತೇನೆ ನಮ್ಮ ಮನೆಗೆ ಬಾ ಎಂದು ಆಕೆಯನ್ನು ಲಕ್ನೋದಲ್ಲಿ ಇಳಿಸಿಕೊಂಡ ಆತ ಹುಡುಗಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.