ನಸುಕಿನ ಜಾವದಲ್ಲಿ ಈ ಘಟನೆ ನಡೆದಿದೆ. ಅಂಧೇರಿ ನಿವಾಸಿಯಾದ ಯುವತಿ ರೇ ರಸ್ತೆಯಲ್ಲಿರುವ ಧಾರ್ಮಿಕ ಕೇಂದ್ರ ಒಂದಕ್ಕೆ ಹೋಗಿದ್ದಳು. ರೇ ರೋಡ್ ನಿವಾಸಿ ನೂರ್ ಹಸನ್ ಶೇಖ್(21) , ವಡಾಲಾ ನಿವಾಸಿ ರಾಹುಲ್ ರಫೀಕ್ ಮಂಡಲ್(20) ಮತ್ತು ಅಂಟೋಪ್ ಹಿಲ್ ನಿವಾಸಿ ಪಂಚು ಗಣೇಶ್ ಥಾಕೀರ್(22) ರಸ್ತೆಯಲ್ಲಿ ಒಬ್ಬಳೇ ನಿಂತಿದ್ದ ಯುವತಿಯನ್ನು ನೋಡಿದ್ದಾರೆ. ಆಕೆ ಬಗ್ಗೆ ತನಗೆ ಚೆನ್ನಾಗಿ ಗೊತ್ತಿದೆ ಎಂಬಂತೆ ನಟಿಸುತ್ತ ಮಾತನಾಡಿಸಿದ್ದಾನೆ.
ಆಕೆಯನ್ನು ಮನೆಗೆ ತಲುಪಿಸುವುದಾಗಿ ಪುಸಲಾಯಿಸಿದ ಮೂವರು ರೈಲಿನಲ್ಲಿ ಆಕೆಯನ್ನು ಕರೆತಂದು ಚಹಾ ಕುಡಿಸುವ ನೆಪದಲ್ಲಿ ಕೊಟನ್ ಗ್ರೀನ್ನಲ್ಲಿ ಇಳಿದಿದ್ದಾರೆ. ನಂತರ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಟೆಂಪೋ ಒಂದರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಒಬ್ಬಂಟಿ ಯುವತಿಯ ಜತೆ ಮೂವರು ಯುವಕರನ್ನು ನೋಡಿದ ಪಾರ್ಕಿಂಗ್ ಅಟೆಂಡೆಂಟ್ ಸಂಶಯಕ್ಕೊಳಗಾಗಿ ಗಸ್ತಿನಲ್ಲಿರುವ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾನೆ.