ವಿಧವೆಯ ಮೇಲೆ ಅತ್ಯಾಚಾರ ಎಸಗಿದ ಯುವನನ್ನು ಓಡಿಸಿದ ಮೂವರಿಂದ ಮತ್ತೆ ಅತ್ಯಾಚಾರ
ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸುರೇಶ್ ಸಾಹು ಜೊತೆಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಡಿ.23ರಂದು ರಾತ್ರಿ ನಿರ್ಜನ ಸ್ಥಳಕ್ಕೆ ಕರೆದೊಯ್ದ ಸಾಹು ಅತ್ಯಾಚಾರ ಎಸಗಿದ್ದಾನೆ. ಮಹಿಳೆಯ ಕಿರುಚಾಟ ಕೇಳಿ ಅಲ್ಲಿಗೆ ಬಂದ ಇತರ ಮೂವರು ಆರೋಪಿಗಳು ಸಾಹುಗೆ ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಕಳುಹಿಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ಘಟನೆಯ ಸಂಬಂಧ ಆರೋಪಿಗಳಾದ ಸುರೇಶ್ ಸಾಹು(24), ಹರೀಶ್ ಚಂದ್ರಶೇಖರ್(25), ತ್ರೀನಾಥ್ ಮಹಾನಂದ್(24) ಹಾಗೂ ವಿನಯ್ ಯಾದವ್(24) ಎಂಬುವರನ್ನು ಫಂಡ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.