₹2500ರ ಮಹಿಳಾ ಸಮೃದ್ಧಿ ಯೋಜನೆಗೆ ಶೀಘ್ರದಲ್ಲೇ ನೋಂದಣಿ ಪ್ರಾರಂಭ: ಸಿಎಂ ರೇಖಾ ಗುಪ್ತಾ

Sampriya

ಶನಿವಾರ, 8 ಮಾರ್ಚ್ 2025 (16:25 IST)
Photo Courtesy X
ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ₹2500ವನ್ನು ಒದಗಿಸಲು ದೆಹಲಿ ಸರ್ಕಾರ 'ಮಹಿಳಾ ಸಮೃದ್ಧಿ ಯೋಜನೆ'ಯನ್ನು ಅನುಮೋದಿಸಿದ ಬೆನ್ನಲ್ಲೇ ಈ ಯೋಜನೆಗೆ ನೋಂದಣಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ  ಹೇಳಿದರು.

"ಇಂದು ಮಹಿಳಾ ದಿನ. ಇಂದು ನಮ್ಮ ಸಚಿವ ಸಂಪುಟ ಸಭೆ ನಡೆಯಿತು, ಮತ್ತು ನಮ್ಮ ಸಚಿವ ಸಂಪುಟವು ಈ ಯೋಜನೆಗೆ ಅನುಮೋದನೆ ನೀಡಿದೆ - ದೆಹಲಿ ಚುನಾವಣೆಯ ಸಮಯದಲ್ಲಿ ಮಹಿಳೆಯರಿಗೆ ₹2500 ಒದಗಿಸುವ ಭರವಸೆ ನೀಡಿದೆ. ಯೋಜನೆಯ ಅನುಷ್ಠಾನಕ್ಕಾಗಿ ನಾವು ದೆಹಲಿ ಬಜೆಟ್‌ನಲ್ಲಿ ₹5100 ಕೋಟಿ ಒದಗಿಸಿದ್ದೇವೆ ಎಂದರು.

ಇನ್ನೂ ಈ ಯೋಜನೆಗಾಗಿ ನಾನು ಸಮಿತಿಯನ್ನು ರಚಿಸಿದ್ದೇನೆ, ಅದನ್ನು ನಾನು ಮುನ್ನಡೆಸುತ್ತೇನೆ ಮತ್ತು ಯೋಜನೆಯ ನೋಂದಣಿ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ ಒಂದು ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು ಎಂದು ದೆಹಲಿ ಮಹಿಳೆಯರಿಗೆ ವಿಶ್ವ ಮಹಿಳಾ ದಿನಚಾರಣೆಯಂದು ಗುಡ್‌ನ್ಯೂಸ್ ನೀಡಿದರು.

ಇಂದು ಮೊದಲು, ಕೇಂದ್ರ ಸಚಿವೆ ಮತ್ತು ಬಿಜೆಪಿ ಅಧ್ಯಕ್ಷೆ ಜೆ.ಪಿ. ನಡ್ಡಾ ಅವರು ದೆಹಲಿಯ ಮಹಿಳೆಯರಿಗೆ ನೇರ ನಗದು ವರ್ಗಾವಣೆ ಯೋಜನೆಯಾದ ಮಹಿಳಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ