ಕೇಂದ್ರ ಸರಕಾರದಿಂದ ಬರಪರಿಹಾರ ಹಣ ಬಿಡುಗಡೆ

ಸೋಮವಾರ, 31 ಜುಲೈ 2017 (18:19 IST)
ಕೇಂದ್ರ ಸರಕಾರ ರಾಜ್ಯದ ಬರಗಾಲ ಪರಿಹಾರಕ್ಕಾಗಿ 782 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
 
ಕಳೆದ ತಿಂಗಳು ಜೂನ್ 28 ರಂದೇ ಹಣ ಬಿಡುಗಡೆಗೆ ನಿಗದಿಯಾಗಿದ್ದರೂ ಒಂದು ತಿಂಗಳು ತಡವಾಗಿ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬರಗಾಲ ಪೀಡಿತ ಸಂತ್ರಸ್ಥರಿಗಾಗಿ ಎರಡನೇ ಬಾರಿಗೆ 782 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
 
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು ರಾಜ್ಯ ಸರಕಾರ ಈಗಾಗಲೇ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿದೆ. ಇದೀಗ ಕೇಂದ್ರ ಸರಕಾರದ ಬಿಡುಗಡೆಗೊಳಿಸಿದ 782 ಕೋಟಿ ರೂ. ಹಣಕಾಸಿನ ನೆರವಿನಿಂದ ಬರಗಾಲ ಪೀಡಿತ ಸಂತ್ರಸ್ಥರಿಗೆ ಉಪಯೋಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ