ವಿಶ್ವಸಂಸ್ಥೆಯಲ್ಲಿ ಹಿಂದಿ ಬಳಕೆ ಉತ್ತೇಜನಕ್ಕೆ ಹಣ ಬಿಡುಗಡೆ

ಗುರುವಾರ, 12 ಮೇ 2022 (12:52 IST)
ವಿಶ್ವಸಂಸ್ಥೆ  : ವಿಶ್ವಸಂಸ್ಥೆಯಲ್ಲಿ ಹಿಂದಿ ಬಳಕೆಯನ್ನು ಉತ್ತೇಜಿಸುವ ತನ್ನ ಯೋಜನೆಯ ಭಾಗವಾಗಿ ಭಾರತ ಸರ್ಕಾರ, ವಿಶ್ವಸಂಸ್ಥೆಗೆ 6 ಕೋಟಿ ರು. ನೀಡಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ರಾಯಭಾರಿ ಆರ್.ರವೀಂದ್ರ ಅವರು ಈ ಕುರಿತ ಚೆಕ್ ಅನ್ನು, ವಿಶ್ವಸಂಸ್ಥೆಯ ಜಾಗತಿಕ ಸಂಪರ್ಕ ಇಲಾಖೆಯ ಮಿತಾ ಹೊಸಲಿ ಅವರಿಗೆ ಹಸ್ತಾಂತರಿಸಿದರು.

ವಿಶ್ವದೆಲ್ಲೆಡೆ ಇರುವ ಹಿಂದಿ ಭಾಷಿಕರಿಗೆ ಜಾಗತಿಕ ವಿಷಯಗಳ ಕುರಿತು ಹಿಂದಿ ಮೂಲಕ ಅರಿವು ಮೂಡಿಸಲು 2018ರಲ್ಲಿ ಭಾರತ ಸರ್ಕಾರ ಈ ಯೋಜನೆ ಆರಂಭಿಸಿತ್ತು. ಇದರ ಭಾಗವಾಗಿ ಪ್ರತಿವಾರ ವಿಶ್ವಸಂಸ್ಥೆ ರೇಡಿಯೋದಲ್ಲಿ ಹಿಂದಿ ವಾರ್ತೆ ಇರುತ್ತದೆ. ಇದಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಸುದ್ದಿ ಬಿತ್ತರಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ