ಬಹಿರಂಗವಾಯ್ತು ಪ್ರಧಾನಿ ಮೋದಿ ವಿದ್ಯಾರ್ಹತೆ

ಭಾನುವಾರ, 1 ಮೇ 2016 (13:16 IST)
ಪ್ರಧಾನಿ ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿರುವ ಮಧ್ಯೆ ವರದಿಯೊಂದು ಪ್ರಧಾನಿ ಮೋದಿ ರಾಜ್ಯಶಾಸ್ತ್ರದ ಎಂ.ಎಂ. ಪದವೀಧರರಾಗಿದ್ದು ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯ ವಿದ್ಯಾರ್ಥಿಗಿಂತಲೂ ಮೇಲ್ಮಟ್ಟದಲ್ಲಿದ್ದರು ಎಂದು ಹೇಳಿದೆ.
 
ಗುಜರಾತ್ ವಿಶ್ವವಿದ್ಯಾಲಯದ ಬಳಿ ಇರುವ ಮಾಹಿತಿಯ ಪ್ರಕಾರ, ದೂರಶಿಕ್ಷಣದಲ್ಲಿ ರಾಜ್ಯಶಾಸ್ತ್ರದ ಎಂಎ ಅಭ್ಯಸಿಸಿದ್ದ ಅವರು 1983ರಲ್ಲಿ 62.3% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು ಎಂದು ತಿಳಿದು ಬಂದಿದೆ. 2 ವರ್ಷದ ಎಂಎ ಪದವಿಯಲ್ಲಿ ಅವರು ಯೂರೋಪ್ ರಾಜನೀತಿ, ಭಾರತೀಯ ರಾಜನೀತಿಯ ತೌಲನಿಕ ಅಧ್ಯಯನ, ರಾಜಕಾರಣದ ಮನೋವಿಜ್ಞಾನ ಪಠ್ಯಕ್ರಮಗಳನ್ನು ಅಧ್ಯಯನ ಮಾಡಿದ್ದರು ಎಂದು ಗುಜರಾತ್ ವಿವಿ ಕುಲಪತಿ ಎಂ.ಎನ್. ಪಟೇಲ್ ಸ್ಪಷ್ಟಪಡಿಸಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯಲ್ಲಿ ವರದಿಯಾಗಿದೆ.
 
ಪ್ರಧಾನಿ ಅವರ ಪದವಿ ಶಿಕ್ಷಣದ ಬಗ್ಗೆ ಸಹ ವಿಶ್ವವಿದ್ಯಾಲಯದ ಬಳಿ ಮಾಹಿತಿ ಇದ್ದು ಪದವಿಪೂರ್ವ ಶಿಕ್ಷಣವನ್ನು ಅವರು ವಿಸ್​ನಗರದ ಎಂ.ಎನ್. ವಿಜ್ಞಾನ ಕಾಲೇಜಿನಲ್ಲಿ  ಪೂರೈಸಿದ್ದರು ಎಂದು ಮಾಹಿತಿ ನೀಡಿದೆ. 
 
ಪ್ರಧಾನಿ ಮೋದಿ ವಿದ್ಯಾರ್ಹತೆ ಬಹಿರಂಗ ಪಡಿಸುವಂತೆ ದೆಹಲಿ ಸಿಎಂ ಕೇಜ್ರಿವಾಲ್ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರಿಗೆ ಅರ್ಜಿ ಸಲ್ಲಿಸಿದ್ದರು. 
 
ಮೋದಿ ಅವರ ವಿದ್ಯಾರ್ಹತೆಯ ಬಗ್ಗೆ ಮಾಹಿತಿ ನೀಡುವಂತೆ ಸಿಸಿಐ ದೆಹಲಿ ಹಾಗೂ ಗುಜರಾತ್ ವಿಶ್ವವಿದ್ಯಾಲಯಗಳಿಗೆ ಸೂಚಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ