ಕೊನೆಗೂ ರೌಡಿಶೀಟರ್ ನಾಗ ಅರೆಸ್ಟ್

ಗುರುವಾರ, 11 ಮೇ 2017 (16:47 IST)
ತನ್ನ ಮನೆ ಮೆಲೆ ಪೊಲೀಸರು ದಾಳಿ ಮಾಡಿದ ಬಳಿಕ ನಾಪತ್ತೆಯಾಗಿದ್ದ ರೌಡಿ ನಾಗನನ್ನ  ಕೊನೆಗೂ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅರ್ಕಾಟ್`ನಲ್ಲಿ ನಾಗನನ್ನ ಬಂಧಿಸಿದ್ದಾರೆ ಎನ್ನಲಾಗಿದೆ. ಎಸಿಪಿ ರವಿಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ತೋಟದ ಮನೆಯಲ್ಲಿ ಅಡಗಿದ್ದ ನಾಗ ಫೋನ್ ಮಾಡಲು ಹೆದ್ದಾರಿಗೆ ಬಂದಿದ್ದಾಗ  ಒಂದೂವರೆ ಕಿ.ಮೀ ಚೇಸ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ನಾಗನ ಜೊತೆ ಮಕ್ಕಳಾದ ಶಾಸ್ತ್ರೀ ಮತ್ತು ಗಾಂಧಿಯನ್ನೂ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ರಾತ್ರಿ ವೇಳೆ ನಾಗನನ್ನ ಬೆಂಗಳೂರಿಗೆ ಕರೆ ತಂದು ಬಳಿಕ ನಾಳೆ ನ್ಯಾಯಾಲಯಕ್ಕೆ ಹಾಕರುಪಡಿಸುವ ಸಾಧ್ಯತೆ ಇದೆ.

ಏಪ್ರಿಲ್ 14ರಂದು ಹೆಣ್ಣೂರು ಪೊಲೀಸರು ನಾಗನ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ 14 ಕೋಟಿಗೂ ಅಧಿಕ ಹಣ ನೋಟು ಪತ್ತೆಯಾಗಿದ್ದವು. ಆದರೆ, ಅಂದು ಪೊಲೀಸರ ಕೈಗೆ ನಾಗ ಸಿಕ್ಕಿರಲಿಲ್ಲ. ಸರಿ ಸುಮಾರು 27 ದಿನಗಳಿಂದ ಪೊಲೀಸರು ಹುಡುಕಾಟ ನಡೆಸಿದ್ದರು.

ಈ ಮಧ್ಯೆ, ಅಜ್ಞಾತ ಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡುತ್ತಿದ್ದ ನಾಗ ಪೊಲೀಸರು, ರಾಜಕಾರಣಿಗಳ ಸುರಿಮಳೆಗೈದಿದ್ದ. ನನ್ನ ಬಳಿ ಇದ್ದ ಹಣ ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು ಎಂದು ಹೇಳಿದ್ದ. ನನ್ನ ಮನೆಗೆ ಪೊಲೀಸರು ದಾಳಿ ನಡೆಸಿದ್ದು, ನನ್ನನ್ನ ಎನ್`ಕೌಂಟರ್ ಮಾಡಲು ಎಂದು ಬಾಂಬ್ ಸಿಡಿಸಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ