ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿಯಾಗದ ಸಂಸ್ಥೆಯಾಗಿದ್ದು, ವಿಶೇಷವಾಗಿ ಗುರು ಪೂರ್ಣಮಾ ದಿನದಂದು ಮತ್ತು ವರ್ಷಾಂತ್ಯದವರೆಗೆ ಸಂಗ್ರಹಿಸಿದ ದೇಣಿಗೆಯ ಬಗ್ಗೆ ವಿವರ ಬಹಿರಂಗಪಡಿಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಗುಜರಾತ್ ರಾಜ್ಯದ ಉನಾ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರೆಸ್ಸೆಸ್ ಬೆಂಬಲಿತ ಸಂಘಟನೆಗಳೂ ಕೂಡಾ ನೋಂದಣಿಯಾಗಿಲ್ಲ. ಸ್ಥಳೀಯ ಪೊಲೀಸರ ನೆರವಿನಿಂದ ದೇಣಿಗೆ ಸಂಗ್ರಹಿಸುತ್ತಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.