ಆರ್‌ಟಿಓ ನಿವಾಸದ ಮೇಲೆ ಎಸಿಬಿ ದಾಳಿ: ಕೋಟಿ ಕೋಟಿ ಹಣ, ಹೇರಳ ಆಸ್ತಿ ಪತ್ತೆ

ಮಂಗಳವಾರ, 25 ಅಕ್ಟೋಬರ್ 2016 (14:24 IST)
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಆರ್‌ಟಿಓ ಅಧಿಕಾರಿ ನಿವಾಸದ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಗೋಣಿ ಚೀಲದಲ್ಲಿ ತುಂಬಿಟ್ಟ ಕಂತೆ ಕಂತೆ ನೋಟುಗಳು ಕೋಣೆಯ ತುಂಬಾ ಬೆಳ್ಳಿ ವಸ್ತುಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
 
ಆರ್‌ಟಿಓ ಅಧಿಕಾರಿ ಪೂರ್ಣಚಂದ್ರ ರಾವ್ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ 25 ಕೋಟಿ ರೂಪಾಯಿಗಳ ಮೌಲ್ಯದ ಏಳು ಫ್ಲ್ಯಾಟ್‌ಗಳ ದಾಖಲೆಗಳು, 60 ಕೆಜಿ ಬೆಳ್ಳಿ, ಒಂದು ಕೆಜಿ ಚಿನ್ನ ಮತ್ತು 20 ಲಕ್ಷ ನಗದು ಸೇರಿದಂತೆ ಕೋಟಿ ಕೋಟಿ ಹಣದ ಮೂಲ ಪತ್ತೆಯಾಗಿದೆ.  
 
55 ವರ್ಷ ವಯಸ್ಸಿನ ಆರ್‌ಟಿಓ ಅಧಿಕಾರಿ ಪೂರ್ಣಚಂದ್ರ ರಾವ್, 34 ವರ್ಷಗಳ ಕಾಲ ಸಂಚಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು,ಲಂಚಕೋರ ಅಧಿಕಾರಿ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಎಸಿಬಿ ರೈಡ್ ಮಾಡಿ, ಸಂಪೂರ್ಣ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ.  
 
ಆರೋಪಿ ಪೂರ್ಣಚಂದ್ರ ರಾವ್, ಹೈದ್ರಾಬಾದ್, ವಿಜಯವಾಡಾ, ಗುಂಟೂರು, ವಿನುಕೊಂಡಾ ಸೇರಿದಂತೆ ಹಲವಾರು ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾನೆ. ಒಂದು ಮಿಲ್‌ನ ಮಾಲೀಕ ಕೂಡಾ ಆಗಿದ್ದಾನೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ