ಶೇಮ್ ಶೇಮ್ ಇಂಡಿಯಾ: ಗೋವಾದಲ್ಲಿ ರಶಿಯನ್ ಮಹಿಳೆಯ ಮೇಲೆ ಅತ್ಯಾಚಾರ

ಶನಿವಾರ, 30 ಏಪ್ರಿಲ್ 2016 (11:41 IST)
ತಾನು ಉಳಿದುಕೊಂಡಿದ್ದ ಅತಿಥಿ ಗೃಹದ ಮಾಲೀಕನಿಂದಲೇ ರಶಿಯನ್ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾದ ದೇಶಕ್ಕೆ ಅವಮಾನವಾಗುವಂತಹ ಘಟನೆ ಗೋವಾದಲ್ಲಿ ನಡೆದಿದೆ. 
 
ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು 25 ವರ್ಷದ ಯುವತಿ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಬಂದ ಕೀಚಕ ಮನಸ್ಥಿತಿಯ ಮಾಲೀಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಇನ್ಸಪೆಕ್ಟರ್ ಸಂಜಯ್ ದಲ್ವಿ ತಿಳಿಸಿದ್ದಾರೆ. 
 
ಆರೋಪಿಯನ್ನು ಜೇಮ್ಸ್ ಡಿಸೋಜಾ ಎಂದು ಗುರುತಿಸಲಾಗಿದ್ದು ಆತ ಮೊರ್ಜಿಮ್ ಕ್ಲಬ್ ಅತಿಥಿ ಗೃಹದ ಮಾಲೀಕನಾಗಿದ್ದಾನೆ. 
 
ಘಟನೆಯ ಬಳಿಕ ಆತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧವನ್ನು ಆರಂಭಿಸಲಾಗಿದೆ.
 
ಪೀಡಿತಳಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದ್ದು ಅತ್ಯಾಚಾರವಾಗಿರುವುದು ಸಾಬೀತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   
 
ಮೇ ತಿಂಗಳ ಮೊದಲ ವಾರದಲ್ಲಿ ಆಕೆ ಭಾರತವನ್ನು ಬಿಡಬೇಕಿತ್ತು. 

ವೆಬ್ದುನಿಯಾವನ್ನು ಓದಿ