ಸಚಿನ್​​ ಎ ಬಿಲಿಯನ್​ ಡ್ರೀಮ್ಸ್ ಚಿತ್ರದ ಮೊದಲ ದಿನದ ಗಳಿಕೆ 7 ಕೋಟಿ

ಶನಿವಾರ, 27 ಮೇ 2017 (18:48 IST)
ಮುಂಬೈ:ಮಾಸ್ಟರ್​​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಜೀವನಾಧಾರಿತ ಚಿತ್ರ “ಸಚಿನ್​​ ಎ ಬಿಲಿಯನ್​ ಡ್ರೀಮ್ಸ್​​” ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್​​ ತುಂಬಿ ತುಳುಕಿದ್ದು, ಮೊದಲ ದಿನವೇ ಬರೋಬ್ಬರಿ 7 ಕೋಟಿ ರೂ ಕಲೆಕ್ಷನ್ ದಾಟಿದೆ. 
 
ಕ್ರಿಕೆಟ್​​ ಜಗತ್ತಿನಲ್ಲಿ ದಾಖಲೆಗಳನ್ನು ನಿರ್ಮಿಸಿರುವ ಸಚಿನ್​, ತಮ್ಮ ಕುರಿತು ಮೂಡಿಬಂದ ಚಿತ್ರದ ಹಣ ಗಳಿಕೆಯಲ್ಲೂ ದಾಖಲೆ ಬರೆದಿದ್ದಾರೆ. ಮೊದಲ ದಿನವೇ 7 ಕೋಟಿ ರೂ ದಾಟಿದ್ದು, ಸುಮಾರು 8 ಕೋಟಿಯನ್ನೂ ತಲುಪಿರಬಹುದೆಂದು ಅಂದಾಜಿಸಲಾಗಿದೆ.
 
ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಇಂಗ್ಲೀಷ್​​ ಭಾಷೆಯ ಅವತರಣಿಕೆಯಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಸಚಿನ್​​ ಅವರ ಬಾಲ್ಯದ ನೆನಪುಗಳು, ಮುಖ್ಯವಾಗಿ ಕ್ರಿಕೆಟ್​​ ಜಗತ್ತಿಗೆ ಸಚಿನ್​ ಆಗಮನ, ಅವರ ಸಾಧನೆ, ದಾಖಲೆಗಳು ಹೀಗೆ ಎಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ