ಸಹಖೈದಿ ಸಾವು: ಕೋರ್ಟ್ ನಲ್ಲಿ ಇಂದ್ರಾಣಿ ಮುಖರ್ಜಿ ಹೇಳಿದ್ದೇನು?

ಬುಧವಾರ, 28 ಜೂನ್ 2017 (16:21 IST)
ಮುಂಬೈ:ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಇಂದ್ರಾಣಿ ಮುಖರ್ಜಿ ಜೈಲಿನ ತನ್ನ  ಸಹಖೈದಿ ಮಂಜುಳಾ ಶೆಟ್ಟಿ ಕುತ್ತಿಗೆಗೆ ಸೀರೆ ಹಾಕಿ ಜೈಲು ಅಧೀಕ್ಷಕರ ಕೊಠಡಿಯಿಂದ ಎಳೆದೊಯ್ಯುತ್ತಿರುವುದನ್ನು ತಾನು ನೋಡಿರುವುದಾಗಿ ಕೋರ್ಟ್ ಗೆ ತಿಳಿಸಿದ್ದಾರೆ.
 
ಮುಂಬೈನ ಬೈಕುಲಾ ಜೈಲಿನಲ್ಲಿ ನಡೆದ ಗಲಭೆಯ ವೇಳೆ ಮಹಿಳಾ ಜೈಲು ಅಧಿಕಾರಿಗಳ ಹಲ್ಲೆಯಿಂದಾಗಿ ಇಂದ್ರಾಣಿ ಸಹಖೈದಿ ಮಂಜುಳಾ ಮೃತಪಟ್ಟಿದ್ದಾರೆ. ಅಲ್ಲದೆ ಮೃತ ಮಹಿಳಾ ಖೈದಿಗೆ ಲೈಂಗಿಕ ಕಿರುಕುಳ ನೀಡಿ ಅಮಾನುಷವಾಗಿ ಹತ್ಯೆಮಾಡಲಾಗಿದೆ ಎಂದು ಆರೋಪಿಸಲಾಗಿದೆ.
 
ಈ ಸಂಬಂಧ ಮುಂಬೈ ಕೋರ್ಟ್ ನಲ್ಲಿ ಸಾಕ್ಷ್ಯ ನುಡಿದಿರುವ ಇಂದ್ರಾಣಿ ಮುಖರ್ಜಿ, ಜೈಲಿನ ಸಿಬ್ಬಂದಿ ಮಂಜುಳಾ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನಾನು ಮತ್ತು ಇತರೆ ಖೈದಿಗಳು ಬಾಗಿಲಿನ ರಂಧ್ರದ ಮೂಲಕ ನೋಡಿದ್ದೇವೆ. ಆದರೆ ಇದನ್ನು ಕೋರ್ಟ್ ನಲ್ಲಿ ಹೇಳಿದರೆ ನೀವು ಅದೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಜೈಲು ಸಿಬ್ಬಂದಿ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಮಹಿಳಾ ಖೈದಿ ಸಾವಿಗೆ ತನ್ನ ಕಕ್ಷಿದಾರೆ ಇಂದ್ರಾಣಿ ಮುಖರ್ಜಿ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಈ ಸಂಬಂಧ ಕೋರ್ಟ್ ನಲ್ಲಿ ಹೇಳಿಕೆ ನೀಡಲು ಬಯಸಿದ್ದಾರೆ ಎಂದು ಇಂದ್ರಾಣಿ ಪರ ವಕೀಲ ಗುಂಜನ್ ಮಂಗಲಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಂದ್ರಾಣಿ ಮುಖರ್ಜಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
 

ವೆಬ್ದುನಿಯಾವನ್ನು ಓದಿ