ಅನಗತ್ಯ ಪಿಐಎಲ್ ಜತೆ ಕೋರ್ಟ್ ಸಮಯ ವ್ಯರ್ಥ: ಟಿ ಜೆ ಅಬ್ರಾಹಂ ಗೆ 25 ಲಕ್ಷ ದಂಡ

ಸೋಮವಾರ, 3 ಜುಲೈ 2017 (16:57 IST)
ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರು ಸಾಮಾಜಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅನ್ನು ದುರುಪಯೀಗ ಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಬರೋಬ್ಬರಿ 25 ಲಕ್ಷ ರೂ ದಂಡ ವಿಧಿಸಿದೆ.
 
ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಉದ್ದೇಶಿತ ಮಿನಿ ವಿಧಾಸೌಧ ಸ್ಥಳಾಂತರ ಸಂಬಂಧ ಟಿ ಜೆ ಅಬ್ರಾಹಂ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ಎ ಎಂ ಖನ್ವಿಲ್ಕರ್ ಅವರಿದ್ದ ಪೀಠ, ಮಿನಿ ವಿಧಾನ ಸೌಧ ಸ್ಥಳಾಂತರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ ಎಂದು ಅರ್ಜಿ ವಜಾಗೊಳಿಸಿದೆ ಅಲ್ಲದೇ ಅನಗತ್ಯವಾಗಿ ಪಿಐಎಲ್ ಸಲ್ಲಿಸಿ ಕೋರ್ಟ್ ನ ಸಮಯವನ್ನು ವ್ಯರ್ಥಗೊಳಿಸಿರುವುದಕ್ಕಾಗಿ 25 ಲಕ್ಷ ರೂ ದಂದ ವಿಧಿಸಿದ್ದು, ಎರಡು ವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಗೆ ಈ ಹಣ ಪಾವತಿಸುವಂತೆ ಸೂಚಿಸಿದೆ.
 

ವೆಬ್ದುನಿಯಾವನ್ನು ಓದಿ