ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಆರಂಭ

ಸೋಮವಾರ, 7 ಆಗಸ್ಟ್ 2023 (12:35 IST)
ಲಕ್ನೋ : ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಇಂದು 10.30ರಿಂದ ಆರಂಭವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅಧಿಕಾರಿಗಳ ತಂಡ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪುನರಾರಂಭಿಸಲಿದ್ದಾರೆ.
 
ಇಂದು ಶ್ರಾವಣ ತಿಂಗಳ ಐದನೇ ಸೋಮವಾರ (ಹಿಂದೂಗಳ ಅತ್ಯಂತ ಮಂಗಳಕರ ಅವಧಿಗಳಲ್ಲಿ ಒಂದಾಗಿದೆ) ಆಗಿರುವುದರಿಂದ ಸ್ವಲ್ಪ ವಿಳಂಬವಾಗಬಹುದು, ಹಿಂದೂ ಸಂಘಟನೆಯ ಪರ ವಕೀಲ ಸುಧೀರ್ ತ್ರಿಪಾಠಿ ಸುದ್ದಿ ಸಂಸ್ಥೆ ತಿಳಿಸಿದರು.

ಈಗಾಗಲೇ ಈ ಸಮೀಕ್ಷೆಗೆ ಕಾರ್ಯಯೋಜನೆಯನ್ನು ಮಾಡಿದ್ದು, ಸಮೀಕ್ಷೆ ನಡೆಸಲು ಮಸೀದಿಯ ನಿರ್ವಹಕರಾದ ಅಂಜುಮನ್ ಇಂತೇಜಾಮಿಯಾ ಸಮಿತಿಯು ಸಹಕರಿಸುತ್ತಿದೆ ಎಂದು ವಕೀಲ ಸುಧೀರ್ ತ್ರಿಪಾಠಿ ತಿಳಿಸಿದ್ದಾರೆ. ಎಎಸ್ಐ ಸಮೀಕ್ಷೆಯ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಹಿಂದೂ ಸಂಘಟನೆ ಪರ ಮತ್ತೊಬ್ಬ ವಕೀಲ ಸುಭಾಷ್ ನಂದನ್ ಚತುರ್ವೇದಿ, ಸಮೀಕ್ಷೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ