ಮರಾಠಿಗರು, ಹಿಂದುತ್ವಕ್ಕಾಗಿ ನಿರಂತರ ಹೋರಾಟ: ಉಧ್ಬವ್ ಠಾಕ್ರೆ

ಬುಧವಾರ, 27 ಜುಲೈ 2016 (14:28 IST)
ಕಳೆದ 50 ವರ್ಷಗಳಿಂದ ಮರಾಠಿಗರಿಗಾಗಿ ಮತ್ತು ಹಿಂದುತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಶಿವಸೇನೆ. ಮುಂದೆಯೂ ತನ್ನ ಸಂಪ್ರದಾಯವನ್ನು ಮುಂದುವರಿಸಲಿದೆ ಎಂದು ಶಿವಸೇನೆ ಮುಖ್ಯಸ್ಥ ಉಧ್ಬವ್ ಠಾಕ್ರೆ ಹೇಳಿದ್ದಾರೆ.
 
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಠಾಕ್ರೆ, ಶಿವಸೇನೆ ರಾಜಕೀಯ ಪಕ್ಷವಾಗಿರಬಹುದು. ಆದರೆ, ಅದರ ಸಿದ್ಧಾಂತ ಸಾಮಾನ್ಯ ಮನುಷ್ಯರಲ್ಲಿ ಆಳವಾಗಿ ಬೇರೂರಿದೆ ಎಂದು ತಿಳಿಸಿದ್ದಾರೆ.
 
ಮಹಾರಾಷ್ಟ್ರದ ಮರಾಠಿಗಳ ಏಳಿಗೆಗಾಗಿ ಶಿವಸೈನಿಕರ ತ್ಯಾಗ ಬಲಿದಾನಗಳನ್ನು ನಾವು ಮರೆಯುವಂತಿಲ್ಲ. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ನಮ್ಮ ಹೋರಾಟಕ್ಕೆ ಅಂತ್ಯವೆನ್ನುವುದಿಲ್ಲ ಎಂದು ಘೋಷಿಸಿದ್ದಾರೆ.
 
ಮರಾಠಿಗರಿಗಾಗಿ ನಾವು ಹೋರಾಟ ಆರಂಭಿಸಿದ್ದಾಗ ಶಿವಸೇನೆ ದೇಶವನ್ನು ಮರೆತಿದೆ ಎನ್ನುವ ಆರೋಪಗಳಿದ್ದವು. ನಾವು ದೇಶಕ್ಕಾಗಿ ಹೋರಾಟ ಮುಂದುವರಿಸಿದಾಗ ಶಿವಸೇನೆ ಮರಾಠಿಗರನ್ನು ಮರೆತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದ್ದವು ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಲೇವಡಿ ಮಾಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ