ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಸಹಾರಾ ಕಂಪನಿಯಿಂದ 40 ಕಿಕ್‌ಬ್ಯಾಕ್ ಪಡೆದಿದ್ದರು ಎಂದು ರಾಹುಲ್ ಆರೋಪಿಸಿದ್ದರು. ಅದಕ್ಕೆ ಸಾಕ್ಷ್ಯವಾಗಿ ಸಹಾರಾ ಡೈರಿಯಲ್ಲಿ ಬರೆದಿರುವ ಹೆಸರಿನ ಪಟ್ಟಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಅದರಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೆಸರು ಕೂಡ ಇತ್ತು. ಹೀಗಾಗಿ ರಾಹುಲ್ ಎಸೆದ ಬಾಂಬ್ ಕಾಂಗ್ರೆಸ್ ಅಂಗಳದಲ್ಲೇ ಸಿಡಿದು ಕಾಂಗ್ರೆಸ್‌ನಲ್ಲೇ ಭೂಕಂಪವನ್ನು ಸೃಷ್ಟಿಸಿತು. ಇನ್ನೊಂದೆಡೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಘೋಷಣೆಯಾಗಿರುವ ಶೀಲಾ ಅವರನ್ನು ಹಣಿಯಲು ಪಕ್ಷದವರೇ ನಡೆಸಿದ ಕುತಂತ್ರ ಎಂಬ ಮಾತುಗಳು ಸಹ ಕೇಳಿ ಬಂದಿತ್ತು.
ಇದೆಲ್ಲವೂ ಕಪೋಲ ಕಲ್ಪಿತ. ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಸಹಾರಾ ಡೈರಿ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ತನ್ನ ಅಭಿಪ್ರಾಯವನ್ನು ತಿಳಿಸಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ ಶೀಲಾ. ಈ ಮೂಲಕ ರಾಹುಲ್ ಪ್ರಯೋಗಿಸಿದ ಬಾಣ ಅವರ ಪಾಳೆಯದಿಂದಲೇ ಮೊಂಡಾಗಿದಂತಾಗಿದೆ.