ಮಾಜಿ ಮುಖ್ಯಮಂತ್ರಿ ಅಳಿಯನ ಬಂಧನ

ಭಾನುವಾರ, 13 ನವೆಂಬರ್ 2016 (12:24 IST)
ನವದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಳಿಯ ಇಮ್ರಾನ್‌ನನ್ನು ಬೆಂಗಳೂರಿನ ಹಲಸೂರಿನಲ್ಲಿ ಬಂಧಿಸಲಾಗಿದ್ದು ದೆಹಲಿ ಪೊಲೀಸರು ಕರೆದೊಯ್ದಿದ್ದಾರೆ.

ಇಮ್ರಾನ್ ಮೇಲೆ ಶೀಲಾ ದೀಕ್ಷಿತ್  ಅವರ ಪುತ್ರಿ ಲತಿಕಾ ಸೈಯ್ಯದ್ ಪತಿಯ ವಿರುದ್ಧ ಕಳೆದ 10 ತಿಂಗಳ ಹಿಂದೆ ಕೌಟುಂಹಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು.
 
2 ದಿನಗಳ ಹಿಂದೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದ ಇಮ್ರಾನ್‌ನನ್ನು ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಬಳಿಕ ದೆಹಲಿ ಪೊಲೀಸರು ಅವರನ್ನು ವಾರಂಟ್ ಪಡೆದು ಕರೆದೊಯ್ದಿದ್ದಾರೆ. 
 
ಇಮ್ರಾನ್ ಮತ್ತು ದೀಕ್ಷಿತ್ ಪುತ್ರಿ ಕಳೆದ 10 ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ