ದೇಶಭಕ್ತಿ ಘೋಷಣೆ ಸಾಕು, ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕು: ಬಿಜೆಪಿಗೆ ಶಿವಸೇನೆ
ಗುರುವಾರ, 13 ಅಕ್ಟೋಬರ್ 2016 (19:35 IST)
ದೇಶ ಭಕ್ತಿ ಘೋಷಣೆಗಳನ್ನು ಕೂಗಿದರೆ ಮಾತ್ರ ಸಾಲದು. ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿ ಎಂದು ಶಿವಸೇನೆ ಬಿಜೆಪಿಗೆ ತಾಕೀತು ಮಾಡಿದೆ.
ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ರಾಮಮಂದಿರ ವಿಷಯ ಪ್ರಸ್ತಾಪಿಸಲಿದೆ ಎನ್ನುವ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಹೇಳಿಕೆ ನೀಡಿದ ಮಾರನೇ ದಿನವೇ ಶಿವಸೇನೆ ವಾಗ್ದಾಳಿ ನಡೆಸಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 300 ಸಂಸದರು ಬೆಂಬಲ ನೀಡಿದ್ದರೂ ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಇದರ ಹಿಂದಿರುವ ಕಾರಣವೇನು ಎಂದು ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 300 ಸಂಸದರು ಬೆಂಬಲ ನೀಡಿದ್ದರೂ ರಾಮ ಮಂದಿರ ನಿರ್ಮಿಸಲು ಸಾಧ್ಯವಾಗದಿದ್ದರೇ ಮತ್ತೆ ಯಾವಾಗ ರಾಮಮಂದಿರ ನಿರ್ಮಾಣ ಮಾಡುತ್ತೀರಿ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
ಪಿಒಕೆಯಲ್ಲಿ ನಡೆದ ಸೀಮಿತ ದಾಳಿ ಮತ್ತು ಲಕ್ನೋದಲ್ಲಿ ನಡೆದ ಭಾರಿ ಸಭೆಯ ನಂತರ ಪ್ರಧಾನಿ ಮೋದಿಗೆ ಮತ್ತಷ್ಟು ಬೆಂಬಲ ದೊರೆತಿದೆ. ಆದ್ದರಿಂದ, ಮೋದಿ ಕೂಡಲೇ ರಾಮಮಂದಿರ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ