ನವದೆಹಲಿ : ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ದಿನಬಳಕೆ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದರ ವಿರುದ್ಧ 4.50 ಲಕ್ಷ ಸೇಲ್ಸ್ಮನ್ಸ್ ಗಳು ಪ್ರತಿಭಟನೆಗೆ ಇಳಿದಿದ್ದಾರೆ.
ಜಿಯೋ ಇತ್ತೀಚೆಗೆ ದಿನಬಳಕೆ ವಸ್ತುಗಳನ್ನು ಕಡಿಮೆ ದರದಲ್ಲಿ ಜಿಯೋ ಮಾರ್ಟ್ ಮೂಲಕ ಕಿರಾಣಿ ಅಂಗಡಿ ಮಾಲೀಕರಿಗೆ ನೀಡುತ್ತಿದೆ. ಈ ಹಿನ್ನೆಲೆ ಸೇಲ್ಸ್ಮನ್ಸ್ ಗಳು ಜಿಯೋ ಕಂಪನಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಒಂದು ವೇಳೆ ನೀವು ಕಡಿಮೆ ದರದಲ್ಲಿ ಉತ್ಪನ್ನಗಳ ಪೂರೈಕೆ ನಿಲ್ಲಿಸದೇ ಹೋದರೆ, ನಾವು ನಮ್ಮ ಉತ್ಪನ್ನಗಳ ಪೂರೈಕೆಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆಯನ್ನು ಹಾಕುತ್ತಿದ್ದಾರೆ.
ಇತ್ತೀಚೆಗೆ ರಿಲಯನ್ಸ್ ತನ್ನ ಜಿಯೋ ಮಾರ್ಟ್ನಲ್ಲಿ ಎಲ್ಲ ದಿನಬಳಕೆಯ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಕಿರಾಣಿ ಅಂಗಡಿಗೆ ಮಾರಾಟ ಮಾಡುತ್ತಿದೆ. ಈ ಪರಿಣಾಮ ಕಿರಾಣಿ ಅಂಗಡಿ ಅವರಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಸೇಲ್ಸ್ಮನ್ಸ್ ಗಳಿಗೆ ದೊಡ್ಡ ಪೆಟ್ಟುಬಿದ್ದಿದೆ.
ಇದಕ್ಕೆ 4.50 ಲಕ್ಷ ಸೇಲ್ಸ್ಮನ್ಸ್ ಗಳು ರಿಲಯನ್ಸ್ ಕಂಪನಿ ಕಡಿಮೆ ಹಣದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ನಮ್ಮ ವ್ಯಾಪಾರದಲ್ಲಿ ಶೇ.25 ಕಡಿಮೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ.