ಐಟಿ ದಾಳಿ ವೇಳೆ ಶಶಿಕಲಾ ನಟರಾಜನ್ ಬಗ್ಗೆ ಶಾಕಿಂಗ್ ವರದಿ!
ಶಶಿಕಲಾ ಸಂಬಂಧಿ ಹಾಗೂ ಜಯಾ ಟಿವಿ ವ್ಯವಸ್ಥಾಪಕ ವಿವೇಕ್ ಜಯರಾಮನ್ ಬಳಿ 100 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ನೋಟು ಅಮಾನ್ಯದ ಬಳಿಕ ಈ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ. ಅಲ್ಲದೆ ಕೋಟ್ಯಂತರ ನಗದು, ಚಿನ್ನಾಭರಣ, 20 ಕ್ಕೂ ಹೆಚ್ಚು ನಕಲಿ ಕಂಪನಿಗಳ ಹೆಸರಲ್ಲಿ ಖಾತೆ ಪತ್ತೆಯಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಶಶಿಕಲಾಗೂ ಈ ನಕಲಿ ಕಂಪನಿಗಳ ಒಡನಾಟವಿತ್ತು ಎಂದು ಶಂಕಿಸಲಾಗಿದೆ.