ಶಾಕಿಂಗ್: ಉಗ್ರ ಬುರ್ಹಾನ್‌ ವನಿ ಹತ್ಯೆಗೆ ಪೊಲೀಸರು ಯವಕರ ಕ್ಷಮೆ ಕೋರಲಿ ಎಂದ ಸಿಎಂ ಮೆಹಬೂಬಾ ಮುಫ್ತಿ

ಬುಧವಾರ, 3 ಆಗಸ್ಟ್ 2016 (19:01 IST)
ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವನಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಪೊಲೀಸರು ರಾಜ್ಯದ ಯುವಕರ ಕ್ಷಮೆ ಕೋರಲಿ ಎಂದು ಜಮ್ಮು ಕಾಶ್ಮಿರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.
 
ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಕಾಶ್ಮಿರಿ ಯುವಕರ ಕ್ಷಮೆ ಕೋರಿದಲ್ಲಿ ರಾಜ್ಯದಲ್ಲಿ ಶಾಂತಿ ನೆಲಸಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ. 
 
ಪೊಲೀಸರು ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಓಡಾಡದಂತೆ ಸಲಹೆ ನೀಡಿದ್ದಾರೆ ಎಂದು ಅನಾಮಧೇಯರಾಗಿರಲು ಬಯಸಿದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 
ಇದಕ್ಕಿಂತ ಮೊದಲು, ದಕ್ಷಿಣ ಅನಂತ್‌ನಾಗ್ ಜಿಲ್ಲೆಯ ಕೋಕೆರ್‌ನಾಗ್ ಪ್ರದೇಶದಲ್ಲಿ ಜುಲೈ 8 ರಂದು ಅಡಗಿದ್ದ ಮೂವರು ಉಗ್ರರಲ್ಲಿ ಬುರ್ಹಾನ್ ವನಿ ಹಿಜ್ಬುಲ್ ಮುಜಾಹಿದಿನ್ ಸಂಘಟನೆಗೆ ಸೇರಿದವನು ಎಂದು ಸೇನಾಪಡೆಗಳಿಗೆ ತಿಳಿದಿರಲಿಲ್ಲ ಎಂದು ಸಿಎಂ ಮೆಹಬೂಬಾ ಹೇಳಿಕೆ ನೀಡಿರುವುದು ಪ್ರತಿಯೊಬ್ಬರಿಗೆ ಆಘಾತವನ್ನು ತಂದಿತ್ತು.  
 
ಒಂದು ವೇಳೆ, ಸೇನಾಪಡೆಗಳಿಗೆ ಹಿಜ್ಬುಲ್ ಉಗ್ರ ಬುಹ್ರಾನ್ ವನಿ ಅಡಗಿದ್ದಾನೆ ಎಂದು ಗೊತ್ತಾಗಿದ್ದಲ್ಲಿ ಮತ್ತೊಂದು ಅವಕಾಶ ಕೊಡಬೇಕಾಗಿತ್ತು ಎಂದು ಸಿಎಂ ಮೆಹಬೂಬಾ ಮುಫ್ತಿ ನೀಡಿದ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ