ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕಿಂಗ್ ನ್ಯೂಸ್!
ಸುಮಾರು 11 ಕಿ.ಮೀ. ಬೆಟ್ಟ ಹತ್ತಿ ಬರುವ ಯಾತ್ರಿಕರಿಗೆ 2 ಲಡ್ಡು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಇದರಿಂದ ಸುಮಾರು 142 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಟಿಟಿಡಿ ಕಾರಣ ನೀಡಿದೆ. ಇದೇ ಕಾರಣಕ್ಕೆ ಉಚಿತ ಲಡ್ಡು ನೀಡುವ ಪದ್ಧತಿ ನಿಲ್ಲಲಿದೆ. ಕೋಟ್ಯಂತರ ರೂ. ಆದಾಯ ತರುವ ತಿರುಪತಿಯಲ್ಲಿ ನಷ್ಟದ ಮಾತೆಲ್ಲಿ ಎಂಬ ಭಕ್ತರ ಪ್ರಶ್ನೆಗೆ ಉತ್ತರವಿಲ್ಲ.