ಪೊಲೀಸರಿಂದ ಶೂಟೌಟ್ : ದೇಶಾದ್ಯಂತ ಹತ್ಯೆ ಖಂಡಿಸಿ ಹಿಂಸಾಚಾರ

ಶನಿವಾರ, 1 ಜುಲೈ 2023 (11:25 IST)
ಪ್ಯಾರಿಸ್ : ಕಾರು ನಿಲ್ಲಿಸದ್ದಕ್ಕೆ 17 ವರ್ಷದ ಯುವಕನನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದನ್ನು ಖಂಡಿಸಿ ಫ್ರಾನ್ಸ್ ದೇಶಾದ್ಯಂತ ಹಿಂಸಾಚಾರ  ನಡೆದಿದೆ.

ಕಲ್ಲು ತೂರಾಟ ಮಾಡಿರುವ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 40ಕ್ಕೂ ಹೆಚ್ಚು ಕಾರುಗಳು ಧಗಧಗಿಸಿವೆ. ಘರ್ಷಣೆಗಳಲ್ಲಿ 25ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. 

ಪೊಲೀಸರು ಪರಿಸ್ಥಿತಿ ನಿಭಾಯಿಸಲು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. 160ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಚಾಲಕನನ್ನು ಕೊಂದ ಪೊಲೀಸರ ಕೃತ್ಯವನ್ನು ಖುದ್ದು ದೇಶಾಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಖಂಡಿಸಿದ್ದಾರೆ. ಇದು ಕ್ಷಮಿಸಲಾಗದ ಅಪರಾಧ ಎಂದು ಅಭಿಪ್ರಾಯಪಟ್ಟು ಜನ ಶಾಂತಿಯಿಂದ ಇರಬೇಕು ಎಂದು ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ