ಅತ್ಯಾಚಾರಕ್ಕೊಳಗಾದ ಮಗಳನ್ನು ಬೇರೆಯವರೊಂದಿಗೆ ಸೆಕ್ಸ್ ಮಾಡು ಎಂದ ಪಾಪಿ ತಾಯಿ!

ಮಂಗಳವಾರ, 13 ಸೆಪ್ಟಂಬರ್ 2022 (17:16 IST)
ಭೋಪಾಲ್ : 22 ವರ್ಷದ ಯುವಕನೊಬ್ಬ ಹದಿಹರಿಯದ ಹುಡುಗಿ ಮೇಲೆ ಅತ್ಯಾಚಾರ ಎಸಗಿದರೆ,
 
ಆರೋಪಿ ತಾಯಿ ಅದೇ ಸಂತ್ರಸ್ತೆಗೆ ಮತ್ತೊಬ್ಬರ ಜತೆಗೆ ದೈಹಿಕ ಸಂಪರ್ಕ ಮಾಡುವಂತೆ ಬಲವಂತ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.

ಮಹಾರಾಷ್ಟ್ರ ನಾಗ್ಪುರದ ಹುಡುಗಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಹಾಗೂ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ ತಾಯಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಗ್ಪುರದ ಹುಡುಗಿ, ಕಳೆದ ಮೇ ತಿಂಗಳಲ್ಲಿ ಭೋಪಾಲ್ಗೆ ಹೋಗಿದ್ದಳು. ಆಗ ಆರೋಪಿ ಅಭಿಷೇಕ್ ಕುರ್ಲಿ ಎಂಬಾತನ ಪರಿಚಯವಾಗಿದೆ.

ಆತ ಹುಡುಗಿಗೆ ದೈಹಿಕ ಸಂಪರ್ಕಕ್ಕೆ ಆಹ್ವಾನಿಸಿದ್ದಾನೆ. ಒಪ್ಪದೇ ಇದ್ದಾಗ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ