ಉಪರಾಷ್ಟ್ರಪತಿಯಾಗಲಿದ್ದಾರಾ ಎಸ್ ಎಂ ಕೃಷ್ಣ?

ಶನಿವಾರ, 15 ಜುಲೈ 2017 (12:28 IST)
ಬೆಂಗಳೂರು: ಕಾಂಗ್ರೆಸ್ ತ್ಯಜಿಸಿ ಇತ್ತೀಚೆಗೆ ಬಿಜೆಪಿ ಸೇರಿದ್ದ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಮುಂಬರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್ ಡಿಎ ಅಭ್ಯರ್ಥಿಯಾಗಲಿದ್ದಾರಾ? ಹೀಗೊಂದು ವರದಿಗಳು ಕೇಳಿಬರುತ್ತಿವೆ.


ಈ ತಿಂಗಳು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಇದಾದ ಬಳಿಕ ಉಪ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಆಗಸ್ಟ್ ನಲ್ಲಿ ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕರ್ನಾಟಕದ ಎಸ್ ಎಂ ಕೃಷ್ಣ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಬಿಜೆಪಿಗೆ ಸೇರಿದ ಮೇಲೆ ಎಸ್ ಎಂ ಕೃಷ್ಣಗೆ ಇದುವರೆಗೆ ಯಾವುದೇ ಪ್ರಮುಖ ಜವಾಬ್ದಾರಿ ನೀಡಿರಲಿಲ್ಲ. ಹೀಗಾಗಿ ಹಿರಿಯ ನಾಯಕನಿಗೆ ಪ್ರತಿಷ್ಠಿತ ಹುದ್ದೆ ನೀಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ.. ಅನುಮಾನಕ್ಕೆ ಕಾರಣವಾಯ್ತು ಡಿಜಿ ಸತ್ಯನಾರಾಯಣ ಪರಪ್ಪನ ಅಗ್ರಹಾರ ಜೈಲಿನ ಪರಿಶೀಲನೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ