ಸೋನಿಯಾ, ರಾಹುಲ್ ಗಾಂಧಿ ಕೊರಳಿಗೆ ಉರುಳಾದ ಹೆರಾಲ್ಡ್ ಕೇಸ್

ಬುಧವಾರ, 5 ಡಿಸೆಂಬರ್ 2018 (09:52 IST)
ನವದೆಹಲಿ: ನ್ಯಾಷನಲ್ ಹೆರಾಲ್ಡ್  ಅವ್ಯವಹಾರ ಪ್ರಕರಣ ಕಾಂಗ್ರೆಸ್ ಧುರೀಣರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಉರುಳಾಗುವ ಸಾಧ್ಯತೆಯಿದೆ.

 
ಈ ಪ್ರಕರಣದಲ್ಲಿ ತೆರಿಗೆ ವಿಶ್ಲೇಷಣೆ ವರದಯಿ ಬಗೆಗಿನ ತನಿಖೆಯನ್ನು ಮರು ಆರಂಭಿಸಲು ಆದಾಯ ತೆರಿಗೆ ವಿಭಾಗಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ರಾಹುಲ್ ಮತ್ತು ಸೋನಿಯಾರನ್ನು ತನಿಖೆಗೊಳಪಡಿಸಲು ಸದ್ಯಕ್ಕೆ ಕೋರ್ಟ್ ಅನುಮತಿ ನೀಡಿಲ್ಲ.

2010 ರಲ್ಲಿ ಸ್ಥಾಪಿಸಲಾದ ಯಂಗ್ ಇಂಡಿಯಾ ಕಂಪನಿಯು ನ್ಯಾಷನಲ್ ಹೆರಾಲ್ಡ್ ನಡೆಸುತ್ತಿದ್ದ ಎಜೆಎಲ್ ಕಂಪನಿಯಿಂದ ಎಲ್ಲಾ ಷೇರುಗಳನ್ನು ಖರೀದಿಸಿತ್ತು. ಇದರಿಂದ ರಾಹುಲ್ ಗಾಂಧಿಗೆ ಸುಮಾರು 154 ಕೋಟಿ ರೂ. ಆದಾಯ ಬಂದಿತ್ತು. ಹಾಗಿದ್ದರೂ ತೆರಿಗೆ ಮಾಹಿತಿಯಲ್ಲಿ 68 ಲಕ್ಷ ರೂ. ನಮೂದಿಸಿದ್ದರು. ಈ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ