ತೈವಾನ್ನಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.9 ಎಂದು ಅಳೆಯಲಾಗಿದೆ. ಭೂಕಂಪದಿಂದಾಗಿ ತೈವಾನ್ನಲ್ಲಿ ಕಟ್ಟಡಗಳು ನಲುಗಿವೆ, ಭೂಕಂಪದ ಭೀತಿಯಿಂದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಇದುವರೆಗೆ ಯಾವುದೇ ಆಸ್ತಿ ನಷ್ಟದ ಕುರಿತು ವರದಿಯಾಗಿಲ್ಲ.
ತೈವಾನ್ನ ರಾಜಧಾನಿ ತೈಪೆ ಸೇರಿದಂತೆ ಇಡೀ ದ್ವೀಪದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿವೆ. ಭೂಕಂಪದ ಕೇಂದ್ರಬಿಂದು ದ್ವೀಪದ ಪೂರ್ವ ಕರಾವಳಿಯ ಸಮುದ್ರದಲ್ಲಿದೆ ಎಂದು ತೈವಾನ್ ಹವಾಮಾನ ಇಲಾಖೆ ತಿಳಿಸಿದೆ.