ತರಗತಿಯಲ್ಲಿ ನಿದ್ದೆ ಹೊಡೆಯುತ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ..?

ಶನಿವಾರ, 29 ಜುಲೈ 2017 (13:23 IST)
ಸಾಮಾನ್ಯವಾಗಿ ಶಿಕ್ಷಕರು ವಿದ್ಯೆ ಕಲಿಯದ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡುವುದನ್ನ ಕೇಳಿರುತ್ತೀರಿ. ಆದರೆ, ಇಲ್ಲಿ ನಿದ್ದೆ ಹೊಡೆಯುತ್ತಿದ್ದ ಶಿಕ್ಷಕರಿಗೆ ವಿದ್ಯಾರ್ಥಿಗಳು ಕೊಟ್ಟಿರುವ ಶಿಕ್ಷೆ ಜೀವನ ಪರ್ಯಂತ ಮರೆಯುವಂತಿಲ್ಲ.
 

ಹೌದ, ತೆಲಂಗಾಣದ ಮೆಹಬೂಬ್ ನಗರದ ಸರ್ಕಾರಿ ಶಾಲೆಯಲ್ಲಿ ನಿದ್ದೆ ಹೊಡೆಯುತ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿಗಳು ಮರೆಯಲಾಗದ ಪಾಠ ಕಲಿಸಿದ್ದಾರೆ. ಮಿದ್ಜಿಲ್ ಮಂಡಲ್`ನ ಶಿಕ್ಷಕ ರಾಮುಲು ಶಾಲೆಯಲ್ಲಿ ಪಾಠ ಮಾಡುವುದನ್ನ ಬಿಟ್ಟು ನಿದ್ದೆ ಹೊಡೆಯುತ್ತಿದ್ದರಿಂದ ರೋಸಿಹೋದ ವಿದ್ಯಾರ್ಥಿ ಫೋಟೋ ಕ್ಲಿಕ್ ಮಾಡಿದ್ದಾನೆ. ಬಳಿಕ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಫೋಟೋ ಕಳುಹಿಸಿದ್ದಾನೆ.

ಇದರಿಂದ ಮುಜುಗರಕ್ಕೀಡಾದ ಶಿಕ್ಷಣ ಇಲಾಖೆ ಶಿಕ್ಷಕನನ್ನ ಅಮಾನತು ಮಾಡಿದೆ. ಈ ಹಿಂದೆ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು 5 ವರ್ಷದ ವಿದ್ಯಾರ್ಥಿಗಳು ಕನಿಷ್ಠ ತಂದೆ ತಾಯಿ ಹೆಸರು ಬರೆಯಲೂ ಬಾರದಿರುವುದನ್ನ ಕಂಡು ಐವರು ಶಿಕ್ಷಕರನ್ನ ಸೇವೆಯಿಂದ ಅಮಾನತು ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ