ಜಯಲಲಿತಾ ನಿಗೂಢ ಸಾವು: ಸಿಬಿಐ ತನಿಖೆಗೆ ಸುಪ್ರೀಂ ನಕಾರ

ಗುರುವಾರ, 5 ಜನವರಿ 2017 (17:27 IST)
ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಗೂಢ ಸಾವಿನ ಬಗ್ಗೆ ಸಿಹಿಐ ತನಿಖೆ ನಡೆಸಲು ಆದೇಶಿಸಬೇಕೆಂದು ಕೋರಿ ಎಐಡಿಎಂಕೆ ಬಂಡಾಯ ಸಂಸದೆ ಶಶಿಕಲಾ ಪುಷ್ಪಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ತಿರಸ್ಕರಿಸಿದೆ.
ಆರ್ಟಿಕಲ್ 32 ( ರಾಜ್ಯದಿಂದ ಸಾರ್ವಜನಿಕ ಮೂಲಭೂತ ಹಕ್ಕುಗಳ ಉಲ್ಲಂಘನೆ)  ಅರ್ಜಿ ಸಲ್ಲಿಸಿದರೆ ನಾವು ಈ ಅರ್ಜಿಗಳನ್ನು ತಿರಸ್ಕರಿಸುತ್ತೇವೆ. ಮತ್ತೆ ಇಂತಹ ಅರ್ಜಿಗಳನ್ನು ಸಲ್ಲಿಸಿದರೆ ನಿಮಗೆ ದಂಡ ವಿಧಿಸಬೇಕಾಗುತ್ತದೆ ಎಂದು ದ್ವಿಸದಸ್ಯ ನ್ಯಾಯಪೀಠ ಎಚ್ಚರಿಸಿದೆ.
 
ಜಯಲಲಿತಾ ಸಾವು ನಿಗೂಢವಾಗಿದೆ. ಸಾವಿನ ಹಿಂಗೆ ಪಿತೂರಿ ನಡೆಸಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿ ಎಂದು ಎಐಡಿಎಂಕೆ ಮಾಜಿ ಸಂಸದೆ ಸುಪ್ರೀಂ ಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ