ರಾಮಮಂದಿರ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

ಶುಕ್ರವಾರ, 31 ಮಾರ್ಚ್ 2017 (19:36 IST)
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 
 
ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದ ನಂತರ ಸುಬ್ರಹ್ಮಣ್ಯಂ ಸ್ವಾಮಿ, ನನಗೆ ಸಂತಸವಾಗಿಲ್ಲ ಎಂದಾಗ ಕೋರ್ಟ್, ಹಾಗಾದ್ರೆ ಸಂತಸಪಡಬೇಡಿ ಎಂದು ಎಂದುತ್ತರಿಸಿದೆ.   
 
ಕಳೆದ ಮಾರ್ಚ್ 21 ರಂದು ಸುಪ್ರೀಂಕೋರ್ಟ್, ರಾಮಜನ್ಮಭೂಮಿ- ಬಾಬ್ರಿಮಸೀದಿ ವಿವಾದವನ್ನು ಎಲ್ಲಾ ರಾಜಕೀಯ ಪಕ್ಷಗಳು ಪರಸ್ಪರ ಚರ್ಚಿಸಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವುದು ಸೂಕ್ತ. ಅಗತ್ಯವಾದಲ್ಲಿ ಉಭಯ ಸಮುದಾಯಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ನ್ಯಾಯಮೂರ್ತಿಯನ್ನು ನೀಡಲು ಸಿದ್ದ ಎಂದು ಸಲಹೆ ನೀಡಿತ್ತು.   
 
ಶತಮಾನದಿಂದ ಹಿಂದು ಮತ್ತು ಮುಸ್ಲಿಮರ ನಡುವೆ ವಿವಾದದ ಇತಿಹಾಸವಿರುವ ರಾಮಜನ್ಮಭೂಮಿ-ಬಾಬ್ರಿಮಸೀದಿ ಸಂಧಾನದಲ್ಲಿ ಪ್ರಧಾನ ಸಂಧಾನಕಾರರಾಗಿ ಕುಳಿತುಕೊಳ್ಳಲು ನನಗೆ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಸ್ಪಷ್ಟಪಡಿಸಿದರು.   
 
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಹಲವಾರು ಪ್ರಯತ್ನಗಳು ಹಿಂದೆ ನಡೆದಿವೆ. ಆದರೆ, ಸಂಧಾನ ಫಲಪ್ರದವಾಗಿಲ್ಲ. ನ್ಯಾಯಾಲಯ ಮಧ್ಯಸ್ಥಿಕೆವಹಿಸಿ ವಿವಾದ ಇತ್ಯರ್ಥಗೊಳಿಸುವ ಸಮಯ ಬಂದಿದೆ ಎಂದು ಸ್ವಾಮಿ ಕೋರ್ಟ್‌ಗೆ ಮನವಿ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ