ಖಾಸಗೀತನದ ಹಕ್ಕು ಮೂಲಭೂತ ಹಕ್ಕೇ..? ಸುಪ್ರೀಂಕೋರ್ಟ್`ನಿಂದ ಇಂದು ಮಹತ್ವದ ತೀರ್ಪು
ಗುರುವಾರ, 24 ಆಗಸ್ಟ್ 2017 (09:13 IST)
ತಲಾಖ್ ತೀರ್ಪಿನ ಬಳಿಕ ಸುಪ್ರೀಂಕೋರ್ಟ್ ಇವತ್ತು ಮತ್ತೊಂದು ಮಹತ್ವದ ತೀರಪನ್ನ ಪ್ರಕಟಿಸಲಿದೆ. ಖಾಸಗೀತನದ ಹಕ್ಕು ಮೂಲಭೂತ ಹಕ್ಕೇ ಎಂಬ ಬಗ್ಗೆ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಲಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತ್ಋತ್ವದ 9 ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ಈ ತೀರ್ಪನ್ನ ಪ್ರಕಟಿಸುತ್ತಿದೆ. ಖಾಸಗೀತನದ ಹಕ್ಕು ಮೂಲಭೂತ ಹಕ್ಕೆಂದು ಪರಿಗಣಿಸಬೇಕೆ..? ಬೇಡವೋ? ಎಂಬ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಆಗಸ್ಟ್ 2ರಂದು ತೀರ್ಪು ಕಾಯ್ದಿರಿಸಿತ್ತು. ಸುಪ್ರೀಂಕೋರ್ಟ್ ಇವತ್ತು ನೀಡುವ ತೀರ್ಪು ಹಲವು ಪ್ರಮುಖ ತೀರ್ಪುಗಳ ಮೇಲೆ ಪ್ರಭಾವ ಬೀರಲಿದೆ. ಆಧಾರ್ ಕಾರ್ಡ್`ನ ಮಾನ್ಯತೆ, ಸಲಿಂಗ ಕಾಮ ಅಪರಾಧ ಎಂಬ ಸಂವಿಧಾನದ 377ವಿಧಿ ಹೇರಿಕೆ ಸೇರಿದಂತೆ ಹಲವು ತೀರ್ಪುಗಳ ಮೇಲೆ ಪರಿಣಾಮ ಬೀರಲಿದೆ.
ಖಾಸಗೀತನದ ಹಕ್ಕಿನ ಬಗ್ಗೆ ಪ್ರಬಲ ವಾದ ಮಂಡಿಸಿರುವ ಅರ್ಜಿದಾರನೊಬ್ಬ ಾಧಾರ್ ಕಾರ್ಡ್ ಮಾಡುವಾಗ ಸಂಗ್ರಹಿಸುವ ಬಯೋಮೆಟ್ರಿಕ್ ಡೇಟಾವನ್ನ ಮೂರನೇ ವ್ಯಕ್ತಿ ಪರಿಶೀಲನೆಗೆ ಅವಕಾಶವಿರುವುದರಿಂದ ದುರ್ಬಳಕೆ ಸಾಧ್ಯತೆ ಹೆಚ್ಚಿದೆ ಎಂದಿದ್ದು, 3 ಉದಾಹರಣೆಗಳನ್ನ ಅವರು ಸುಪ್ರೀಂಕೋರ್ಟ್ ಮುಂದಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ