ಐದು ರಾಷ್ಟ್ರಗಳಿಗೆ ಸೀಮಿತ ದಾಳಿ ಬಗ್ಗೆ ವಿವರಣೆ ನೀಡಿದ ಭಾರತ

ಗುರುವಾರ, 29 ಸೆಪ್ಟಂಬರ್ 2016 (18:28 IST)
ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ 40 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆ 18 ಸೈನಿಕರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಂಡಿದೆ.  ದಾಳಿ ನಡೆದ ಕೆಲವೇ ಹೊತ್ತಿನಲ್ಲಿ ವಿಶ್ವದ ಬಲಿಷ್ಠ 5 ರಾಷ್ಟ್ರಗಳಿಗೆ ಈ ದಾಳಿಯ ಕುರಿತು ಭಾರತ ಮಾಹಿತಿ ನೀಡಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಬಲ ರಾಷ್ಟ್ರಗಳಾದ ಅಮೇರಿಕಾ, ಫ್ರಾನ್ಸ್, ಬ್ರಿಟನ್, ರಷ್ಯಾ, ಚೀನಾಗಳಿಗೆ ಭಾರತ ತಾನು ಗಡಿಯಲ್ಲಿನ ಉಗ್ರನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿ ಕಾರ್ಯಾಚರಣೆಯ ವಿವರಣೆಯನ್ನು ನೀಡಿತು.
 
ಭಾರತದ ಕಮಾಂಡೋ ಕಾರ್ಯಾಚರಣೆಯನ್ನು ನೆರೆಯ ದೇಶ ಬಾಂಗ್ಲಾ ಬೆಂಬಲಿಸಿದ್ದು, ಭಾರತಕ್ಕೆ ಪ್ರತಿಕ್ರಿಯಿಸುವ ಹಕ್ಕಿದೆ ಎಂದಿದೆ.
 
ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ಕ್ಯಾಂಪ್‌ಗಳನ್ನು ಗುರಿಯಾಗಿರಿಸಿಕೊಂಡು ಸರ್ಜಿಕಲ್ ಸ್ಟ್ರೈಕ್ (ಸೀಮಿತ ದಾಳಿ) ಕೈಗೊಳ್ಳಲಾಗಿದ್ದು ದಾಳಿಯಲ್ಲಿ 40ಕ್ಕೂ ಹೆಚ್ಚು ಉಗ್ರರು ಮತ್ತು ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಅವರ ಜತೆಗಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ಸೇನಾ ಮುಖ್ಯಸ್ಥ ರಣಬೀರ್ ಸಿಂಗ್ ಬಹಿರಂಗ ಪಡಿಸಿದ್ದು ಇದು ದೇಶಾದ್ಯಂತ ಹೊಸ ಸಂಚಲನವನ್ನು ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ