ಬಿಜೆಪಿ ಮೈತ್ರಿಕೂಟ ಸಾದ್ ಪಕ್ಷದ ಶಾಸಕ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
ಬುಧವಾರ, 20 ಜುಲೈ 2016 (15:34 IST)
ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿ ದಳದ ಅಮಾನತ್ತುಗೊಂಡ ಶಾಸಕ ಪರ್ಗತ್ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಲಂದರ್ ಕಂಟೋನ್ಮೆಂಟ್‌ನಲ್ಲಿ ನೀರು ಶುದ್ದೀಕರಣ ಘಟಕ ಕುರಿತಂತೆ ಅಕಾಲಿ ದಳದ ಹಿರಿಯ ಮುಖಂಡರೊಂದಿಗಿನ ಹಲವು ಭಿನ್ನಾಭಿಪ್ರಾಯಗಳಿಂದಾಗಿ ಪರ್ಗತ್ ಸಿಂಗ್ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿತ್ತು.
ಭಾರತೀಯ ಹಾಕಿ ಕಂಡದ ನಾಯಕರಾಗಿದ್ದ ಪರ್ಗತ್ ಸಿಂಗ್, ಜನಪ್ರಿಯವಲ್ಲದ ಯೋಜನೆಗಳ ಜಾರಿಗೆ ಒತ್ತಡ ಹೇರಲಾಗುತ್ತಿದೆ ಎಂದು ಅಕಾಲಿ ಸರಕಾರವನ್ನು ಬಹಿರಂಗವಾಗಿಯೇ ಟೀಕಿಸಿದ್ದರು.
ಮಾಜಿ ಕ್ರಿಕೆಟಿಗ ಬಿಜೆಪಿ ರಾಜ್ಯಸಭೆ ಸದಸ್ಯ ನವಜೋತ್ ಸಿಂಗ್ ಸಿದ್ದು ತಮ್ಮ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಎರಡು ದಿನಗಳ ನಂತರ ಪರ್ಗತ್ ಹೇಳಿಕೆ ಹೊರಬಿದ್ದಿದೆ.
ಕಳೆದ 2007ರಿಂದ ಅಧಿಕಾರದಲ್ಲಿರುವ ಬಿಜೆಪಿ-ಸಾದ್ ಮೈತ್ರಿಕೂಟ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಭಾರಿ ಪೈಪೋಟಿ ಎದುರಿಸುತ್ತಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಕೂಡಾ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.