ಸಂಸತ್ತಿನಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಸಂಸದ ತಂಬಿದೊರೈ

ಬುಧವಾರ, 9 ಆಗಸ್ಟ್ 2017 (12:26 IST)
ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಇಂದು ಪ್ರಧಾನಿ ಮೋದಿ, ಪ್ರತಿಪಕ್ಷ ನಾಯಕರು ಸಂಸ್ಮರಣಾ ಭಾಷಣ ಮಾಡಿದರು.

 
ಆದರೆ ಈ ಭಾಷಣದ ಸಂದರ್ಭದಲ್ಲಿ ತಮಿಳುನಾಡು ಸಂಸದ ತಂಬಿದೊರೈ ತಮಿಳಿನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಆಕ್ಷೇಪ ವ್ಯಕ್ತವಾಯಿತು.

ಎಲ್ಲರಿಗೂ ತಮಿಳು ಅರ್ಥವಾಗದ ಹಿನ್ನಲೆಯಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ತಂಬಿ ದೊರೈಗೆ ಸೂಚಿಸಿದ್ದು ಅವರು ಸಿಟ್ಟಿಗೇಳುವಂತೆ ಮಾಡಿತು. ನನ್ನ ಹಾಗೆ  ಹಿಂದಿ ಬಾರದ ಇತರ ಸ್ಥಳೀಯ ಭಾಷಾ ಸಂಸದರಿಗೆ ಇಂಗ್ಲಿಷ್ ನಲ್ಲೇ ಮಾತನಾಡುವ ಅನಿವಾರ್ಯತೆಯಿದೆ. ಹಿಂದಿ ಭಾಷಣ ಮಾಡುವಾಗ ನಮಗೆ ಅರ್ಥವಾಗದಿದ್ದರೆ, ಅದನ್ನು ಭಾಷಾಂತರ ಮಾಡಲು ತಜ್ಞರಿದ್ದಾರೆ.

ಆದರೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವಾಗ ಹಿಂದಿ ಅಥವಾ ಇಂಗ್ಲಿಷ್  ಗೆ ಭಾಷಣ ಮಾಡಿಕೊಡಲು ಭಾಷಾಂತರ ಮಾಡುವವರಿಲ್ಲ. ಹೀಗಾಗಿ ನನ್ನಂತಹ ಸಂಸದರು ಅನಿವಾರ್ಯವಾಗಿ ನಮ್ಮ ಭಾಷೆ ಬಿಟ್ಟು ಇಂಗ್ಲಿಷ್ ನಲ್ಲಿ ಮಾತನಾಡಬೇಕಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಹಲವು ಸಂಸದರು ಪಕ್ಷಬೇಧ ಮರೆತು ಅನುಮೋದಿಸಿದರು. ಕೊನೆಗೆ ಮುಂದೊಂದು ದಿನ ಅದಕ್ಕೂ ವ್ಯವಸ್ಥೆ ಮಾಡೋಣ ಎಂದು ಸ್ಪೀಕರ್  ಸುಮಿತ್ರಾ ಮಹಾಜನ್ ಸಮಾಧಾನಪಡಿಸಿದ ಮೇಲೆ ತಂಬಿದೊರೈ ಇಂಗ್ಲಿಷ್ ನಲ್ಲಿ ಭಾಷಣ ಮುಂದುವರಿಸಿದರು.

ಇದನ್ನೂ ಓದಿ.. ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ