ತಮಿಳುನಾಡು ಬಂದ್: ರೈಲ್ ತಡೆಯಲು ಮುಂದಾದ ಸ್ಟಾಲಿನ್, ಕನಿಮೋಳಿ ಬಂಧನ

ಶುಕ್ರವಾರ, 16 ಸೆಪ್ಟಂಬರ್ 2016 (12:58 IST)
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಡೆಯುತ್ತಿರುವ ತಮಿಳುನಾಡು ಬಂದ್ ಸಂದರ್ಭದಲ್ಲಿ ಸೈದಾಪೇಟ್ ರೈಲು ನಿಲ್ದಾಣದಲ್ಲಿ ರೈಲ್ ರೋಖೋ ನಡೆಸಲು ಮುಂದಾಗಿದ್ದ ಡಿಎಂಕೆ ನಾಯಕರಾದ ಸ್ಟಾಲಿನ್ ಮತ್ತು ಕನಿಮೋಳಿಯವರನ್ನ ಪೊಲೀಸರು ಬಂಧಿಸಿದ್ದಾರೆ. 

 
ಕನಿಮೋಳಿ, ಸ್ಟಾಲಿನ್ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ರೈಲ್ ರೋಖೋ ಚಳುವಳಿ ನಡೆಸಿ ರೈಲುಗಳನ್ನು ನಿಲ್ಲಿಸಲು ಯತ್ನಿಸಿದರು. 
 
ಕಾವೇರಿ ವಿಚಾರವಾಗಿ ಕರ್ನಾಟಕದಲ್ಲಿ ತಮಿಳರ ಮೇಲೆ ನಡೆದ ಹಲ್ಲೆ ಮತ್ತು ಜಲವಿವಾದಕ್ಕೆ ಧೀರ್ಘಾವಧಿ ಪರಿಹಾರ ನೀಡಲು ಆಗ್ರಹಿಸಿ ತಮಿಳುನಾಡು ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
 
ಕೆಲವೆಡೆ ಅಂಗಡಿಮುಂಗಟ್ಟುಗಳು ಬಂದ್ ಆಗಿಲ್ಲ. ಮತ್ತೆ ಕೆಲವೆಡೆ ಬಂದ್ ಆಗಿವೆ. ಮುಂಜಾನೆ 8.30ರವರೆಗೆ ಬಸ್, ಆಟೋ ಸಂಚಾರ ಸಾಮಾನ್ಯವಾಗಿತ್ತು. ಮುಂಜಾನೆ 8.30 ರ ಬಳಿಕ ಖಾಸಗಿ ಬಸ್‌ ಮತ್ತು ಆಟೋಗಳು ರಸ್ತೆಗಿಳಿಯುತ್ತಿಲ್ಲ. ಪೆಟ್ರೋಲ್ ಪಂಪ್‌ಗಳು ಸಹ ತೆರೆದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ