ಚೆನ್ನೈನಲ್ಲಿ ಮುಂದುವರೆದ ಪ್ರತಿಭಟನೆ; ಪೊಲೀಸರನ್ನು ತಡೆಯಲು ರಾಷ್ಟ್ರಗೀತೆ ಅಸ್ತ್ರ

ಸೋಮವಾರ, 23 ಜನವರಿ 2017 (09:11 IST)
ಜಲ್ಲಿಕಟ್ಟುಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿ ಮರೀನಾ ಬೀಚ್‌ನಲ್ಲಿ  ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ. 

ನಿಮ್ಮ ಬೇಡಿಕೆ ಈಡೇರಿದೆ, ಇನ್ನಾದರೂ ಪ್ರತಿಭಟನೆಯನ್ನು ಕೈ ಬಿಡಿ ಎಂದು ಪೊಲೀಸರು ಧರಣಿ ನಿರತರ ಬಳಿ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರ ಮನವಿಯ ಮೇರೆಗೆ 8,000 ಜನರು ಅಲ್ಲಿಂದ ತೆರಳಿದ್ದಾರೆ. ಆದರೆ ಉಳಿದ 4,000 ವಿದ್ಯಾರ್ಥಿಗಳು ಮತ್ತು ಅಕ್ಕಪಕ್ಕದ ಗ್ರಾಮದ ಮೀನುಗಾರರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪೊಲೀಸರು ಬಲವಂತವಾಗಿ ಹೊರಹೋಗುವಂತೆ ಒತ್ತಾಯಿಸುತ್ತಿದ್ದರಿಂದ ಪ್ರತಿಭಟನೆ ವಿಭಿನ್ನ ರೂಪ ಪಡೆದಿದ್ದು, ಕಡಲ ತೀರದ ಫ್ಲಾಟ್‌ಪಾರ್ಮ್‌ನಲ್ಲಿ ನಿಂತಿದ್ದ ಪ್ರತಿಭಟನಾಕಾರರು ಮತ್ತೀಗ ಕಡಲಿನಲ್ಲಿ ನಿಂತು ಧರಣಿ ಮುಂದುವರೆಸಿದ್ದಾರೆ. 
 
ಪೊಲೀಸರನ್ನು ತಡೆಯಲು ವಿದ್ಯಾರ್ಥಿಗಳು ರಾಷ್ಟ್ರಗೀತೆ ಅಸ್ತ್ರವನ್ನು ಬಳಸುತ್ತಿದ್ದಾರೆ. ಬಲವಂತವಾಗಿ ಹೊರ ಹಾಕಲು ಬಂದ ಪೊಲೀಸರು ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುತ್ತಿದ್ದಂತೆ ನಿಂತಲ್ಲೇ ನಿಂತಿದ್ದಾರೆ. 
 
ಪ್ರತಿಭಟನಾಕಾರರನ್ನು ಬಲವಂತವಾಗಿ ಕಳುಹಿಸೋಕೆ ಪೊಲೀಸರು ಹರಸಾಹಸ ಪಡುತ್ತಿದ್ದು, ಯಾವುದೇ ರೀತಿಯ ಬಲ ಪ್ರಯೋಗವನ್ನು ಮಾತ್ರ ನಡೆಸುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ