ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ

ಗುರುವಾರ, 4 ಮೇ 2017 (11:29 IST)
ಉಗ್ರರ ದಾಳಿಗೆ ತುತ್ತಾಗಿದ್ದ ಪಂಜಾಬ್`ನ ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮಿಲಿಟರಿ ನೆಲೆಯ ಕೂಗಳತೆಯ ದೂರಿನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.

ಅನುಮಾನಾಸ್ಪದ ಬ್ಯಾಗ್`ನಲ್ಲಿ ಮೊಬೈಲ್ ಟವರ್ ಬ್ಯಾಟರಿಗಳು ಪತ್ತೆಯಾಗಿವೆ. ಬ್ಯಾಗ್`ಗಳ ಮಾಲೀಕರಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಗುರುದಾಸ್ಪುರದ ಬಳಿ ಎಸ್`ಯುವಿ ಪತ್ತೆಯಾಗಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಕಾರಿನ ಮಾಲೀಕರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ.

ಬೆಹ್ರಾಂಪುರ್ ಚೆಕ್ ಪೋಸ್ಟ್ ಬಳಿ ಎಸ್`ಯುವಿ ಕಾರು ತಪಾಸಣೆ ಪೊಲೀಸರು ಯತ್ನಿಸಿದ್ದು, ಕಾರು ನಿಲ್ಲಿಸದೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರ್ ಚೇಸ್ ಮಾಡಿದಾಗ ಮಖಾನ್ ಪುರ್ ಹಳ್ಳಿಯ ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದಿದ್ದರೂ ನಕಲಿ ನೇಮ್ ಪ್ಲೇಟ್ ಹೊಂದಿದ ಕದ್ದ ಕಾರು ಇದಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಪಠಾಣ್ ಕೋಟ್ ದಾಳಿಗೂ ಮುನ್ನಾ ಸಹ ಈ ರೀತಿಯ ಅನುಮಾನಾಸ್ಪದ ವಾಹನ ಪತ್ತೆಯಾಗಿತ್ತು.

ವೆಬ್ದುನಿಯಾವನ್ನು ಓದಿ