ಇಂದಿನ ವರೆಗೆ ಟೆಸ್ಲಾದಿಂದ ಬಿಡುಗಡೆ ಹೊಂದಿದ ಕಾರುಗಳಲ್ಲಿ ಅತ್ಯಂತ ಒಳ್ಳೆಯ ಮಾದರಿ ಇದಾಗಿದ್ದು, ಈ ಕಾರನ್ನು 2017ರಲ್ಲಿ ವಿಶ್ವದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.
ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಈ ಕಾರಿಗೆ ಪಡೆದುಕೊಂಡಿದೆ. ಎರಡು ಮಾದರಿಯಲ್ಲಿ ಮಾಡೆಲ್ 3 ಕಾರು ಬಿಡುಗಡೆಯಾಗಿದೆ.
ಲಾಂಗ್ ರೇಂಜ್ ಮಾದರಿಯ ಕಾರು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಕ್ರಮಿಸಿದರೆ, ಸ್ಟಾಡಂರ್ಡ್ ಮಾದರಿಯ ಕಾರು 354 ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 15 ನಿಮಿಷದಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಗರಿಷ್ಟ 162 ಕೀ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಕಾರಿಗಿದೆ.