ಪೊಲೀಸರಿಗೆ 25 ಸಾವಿರ ರೂ.ದಂಡ ವಿಧಿಸಿದ ನ್ಯಾಯಾಲಯ..!

ಸೋಮವಾರ, 18 ಅಕ್ಟೋಬರ್ 2021 (13:44 IST)
ನವದೆಹಲಿ, ಅ.18 : ಪೌರತ್ವ ತಿದ್ದುಪಡಿ ವಿವಾದದಿಂದ ಭುಗಿಲೆದ್ದ ಗಲಭೆಯ ತನಿಖೆ ವಿಳಂಬ ಹಾಗೂ ಪ್ರತ್ಯೇಕ ಎಫ್ಐಆರ್ ದಾಖಲಿಸದ ದೆಹಲಿ ಪೊಲೀಸರಿಗೆ ನ್ಯಾಯಾಲಯ 25 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.

ಹಿರಿಯ ಪೊಲೀಸರು ಕಿವುಡು ಕಿವಿಗಳಲ್ಲಿ ಪ್ರಕರಣವನ್ನು ನೋಡುತ್ತಿದ್ದಾರೆ ಎಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗಾರ್ಗ್ ಅವರು ಆಕ್ಷೇಪ ವ್ಯಕ್ತ ಪಡಿಸಿದ್ದು, ವಿಳಂಬ ವಿಚಾರಣೆಗೆ ತಗಲುವ ವೆಚ್ಚದ ಬಾಬ್ತಾಗಿ 25 ಸಾವಿರ ರೂಪಾಯಿಗಳನ್ನು ತಪ್ಪಿತಸ್ಥ ಅಧಿಕಾರಿ ವೇತನದಲ್ಲಿ ಕಡಿತ ಮಾಡುವಂತೆ ಗೃಹ ಇಲಾಖೆ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಗುಂಪು ಗಲಭೆಗಳಾದವು. ಅದರಲ್ಲಿ 53 ಮಂದಿ ಮೃತಪಟ್ಟು 700 ಮಂದಿ ಗಾಯಗೊಂಡಿದ್ದರು. ಭಜನಾಪುರ ಪ್ರದೇಶದಲ್ಲಿ ಬೇರೆ ಬೇರೆ ದಿನಗಳಲ್ಲಿ ನಡೆದ ಐದು ಗಲಭೆ ಪ್ರಕರಣದಲ್ಲಿ ಪೊಲೀಸರು ಒಂದೇ ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ನ್ನು ಪ್ರತ್ಯೇಕಗೊಳಿಸಿ ಸಲ್ಲಿಸುವಂತೆ ನ್ಯಾಯಾಲಯ ಈ ಮೊದಲು ಸೂಚಿಸಿತ್ತು.
ತನಿಖೆಯನ್ನು ವಿಳಂಬ ಮಾಡುವ ಮೂಲಕ ಬಂಧಿತ ಆರೋಪಿಗಳು ಜೈಲಿನಲ್ಲೇ ಉಳಿಯುವಂತೆ ಮಾಡಲಾಗಿದೆ ಎಂದು ಆರೋಪಿಗಳ ಪರ ವಕೀಲರು ಆಕ್ಷೇಪಿಸಿದರು. ನ್ಯಾಯಾಲಯದ ಸೂಚನೆಯ ಹೊರತಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿಲ್ಲ ಮತ್ತು ಹಿರಿಯ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಆಕ್ಷೇಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ