ಬೆಂಗಳೂರಿನಲ್ಲಿ ಈ ಬಾರಿ 20+ ಕ್ಷೇತ್ರಗಳನ್ನು ಗೆಲ್ಲಲೇಬೇಕು. ಗುಜರಾತ್ ಚುನಾವಣೆಯಲ್ಲಿ ಸ್ಥಳೀಯ ಮಟ್ಟದ ಚುನಾವಣಾ ತಂತ್ರಗಾರಿಕೆ ಭಾರೀ ಯಶಸ್ಸು ತಂದುಕೊಟ್ಟಿದ್ದು ಅದನ್ನು ಅಳವಡಿಸಿಕೊಳ್ಳಬೇಕು.
ಪ್ರತಿ ವಾರ್ಡ್ನಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಬೇಕು. 1+1 ಕ್ಷೇತ್ರದ ಜವಾಬ್ದಾರಿಯನ್ನು ಹೊತ್ತುಕೊಂಡು ಪಕ್ಷವನ್ನು ಗೆಲ್ಲಿಸಬೇಕು. ಬೂತ್ಗಳಿಗೆ ಸಚಿವರು, ಶಾಸಕರು ಭೇಟಿ ನೀಡಬೇಕು. ವಾರಕ್ಕೊಮ್ಮೆ ಸಮಾಲೋಚನೆ ಸಭೆ ನಡೆಸಬೇಕು ಎಂದು ಟಾಸ್ಕ್ ನೀಡಲಾಗಿದೆ.
ಬೆಂಗಳೂರಿನಲ್ಲಿ ನಮಗೆ ಅತೀ ಹೆಚ್ಚು ಸ್ಥಾನ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಹಿಂದೆ ನಾವು 18 ಸೀಟು ಗೆದ್ದಿದ್ದೇವೆ. ಈ ಬಾರಿ ಪ್ರಯತ್ನ ಹಾಕಿದರೆ ಆ ದಾಖಲೆ ಮುರಿಯುವ ಅವಕಾಶವಿದೆ. ಬೆಂಗಳೂರಿನಲ್ಲಿ ಫೋಕಸ್ ಮಾಡಿ ಕೆಲಸ ಮಾಡಿದರೆ ಹೆಚ್ಚು ಸ್ಥಾನವನ್ನು ನಾವು ಗೆಲ್ಲಬಹುದು. ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಧಮೇಂದ್ರ ಪ್ರಧಾನ್ ಸಭೆಯಲ್ಲಿ ಹೇಳಿದ್ದಾರೆ.