ತಂದೆಯಿಂದಲ್ಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ

ಸೋಮವಾರ, 12 ನವೆಂಬರ್ 2018 (07:00 IST)
ಥಾಣೆ : 16 ವರ್ಷದ ಅಪ್ರಾಪ್ತ ಮಗಳಿಗೆ ರಕ್ಷಣೆ ನೀಡಬೇಕಾಗಿರುವ ತಂದೆಯೇ ಭಕ್ಷಕನಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.


50 ವರ್ಷ ವಯಸ್ಸಿನ ಈ ಪಾಪಿ ತಂದೆ ಮನೆಯವರೆಲ್ಲಾ ಮಲಗಿದ ಬಳಿಕ ಅಪ್ರಾಪ್ತ ಮಗಳ ರೂಮಿಗೆ ಹೋಗಿ ಮಗಳಿಗೆ ನಶೆಯ ಪದಾರ್ಥವನ್ನು ಬಲವಂತವಾಗಿ ತಿನ್ನಿಸಿ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.


ಇತ ಅಕ್ಟೋಬರ್ 2017ರಲ್ಲಿಯೇ  ಮಗಳ ಮೇಲೆ ಈ ಕೃತ್ಯ ಎಸಗುತ್ತಿದ್ದು, ಈ ಬಗ್ಗೆ ಮನೆಯವರಿಗೆ ಹೇಳಿದರೆ ತಾಯಿ ಮತ್ತು ಸಹೋದರರನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ ಕಾರಣ ಬಾಲಕಿ ಎಲ್ಲೂ ಈ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಇದೀಗ ತಂದೆಯ ಉಪಟಳವನ್ನು ಸಹಿಸದೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.


ಸಂತ್ರಸ್ತ ಬಾಲಕಿ ನೀಡಿದ ದೂರಿನಡಿಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ