2 ವರ್ಷದ ಮಗುವನ್ನು ರೇಪ್ ಮಾಡಿ ರೈಲ್ವೇ ಟ್ರ್ಯಾಕ್ ಮೇಲೆ ಎಸದ ಕಾಮುಕ ಅರೆಸ್ಟ್

ಸೋಮವಾರ, 19 ನವೆಂಬರ್ 2018 (07:07 IST)
ನವದೆಹಲಿ : 2 ವರ್ಷದ ಮಗುವನ್ನು ಡ್ರಗ್ ವ್ಯಸನಿ ಯುವಕನೊಬ್ಬ ಅಪಹರಿಸಿ ಅತ್ಯಾಚಾರವೆಸಗಿ ಬಳಿಕ ರೈಲ್ವೇ ಟ್ರ್ಯಾಕ್ ಬಳಿ ಎಸೆದು ಹೋದ ಅಮಾನವೀಯ ಘಟನೆ ನವದೆಹಲಿಯಲ್ಲಿ ನಡೆದಿದೆ.


ಅನಿಲ್ (24) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಈತ  ಉತ್ತರ ದೆಹಲಿಯ ಕಾಟ್ ವಾಲಿ ಪ್ರದೇಶದ ಫುಟ್ ಪಾತ್ ನಲ್ಲಿ ಶುಕ್ರವಾರ ರಾತ್ರಿ ತನ್ನ ತಾಯಿ ಜೊತೆ ಮಲಗಿದ್ದ ಮಗುವನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ , ನಂತರ ಆಕೆಯನ್ನು ರೈಲ್ವೇ ಟ್ರ್ಯಾಕ್ ಬಳಿ ಬಿಸಾಕಿ ಹೋಗಿದ್ದರು. ಇದನ್ನು ಗಮನಿಸಿದ ಅಲ್ಲಿನ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.


ಇತ್ತ ತಾಯಿ ಮಗು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರಿಗೆ ಮಗುವಿನ ಬಗ್ಗೆ ಮಾಹಿತಿ ದೊರಕಿದೆ. ಸದ್ಯ ಕಂದಮ್ಮನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾಳೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳದ ಸಿಸಿಟಿವಿಗಳನ್ನು ಪರಿಶೀಲಿಸಿದ ಪೊಲೀಸರಿಗೆ  ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ