ಮಹಿಳಾ ಉದ್ಯೋಗಿಗಳ ಮೇಲೆ ನಿಗಾ ಇಡಲು ಬಾತ್ ರೂಂನಲ್ಲಿ ಸಿಸಿ ಕ್ಯಾಮೆರಾ ಇಟ್ಟ ಮಾಲೀಕ
ಸೋಮವಾರ, 1 ಫೆಬ್ರವರಿ 2021 (09:33 IST)
ಚೆನ್ನೈ : ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವೆಬ್ ಡಿಸೈನಿಂಗ್ ಸಂಸ್ಥೆಯನ್ನು ನಡೆಸುತ್ತಿರುವ 29 ವರ್ಷದ ಯುವಕನೊಬ್ಬ ತಮ್ಮ ಮಹಿಳಾ ಉದ್ಯೋಗಿಗಳ ಮೇಲೆ ನಿಗಾ ಇಡಲು ವಿಶ್ರಾಂತಿ ಕೊಠಡಿಯ ಬಾತ್ ರೂಂನಲ್ಲಿ ಸಿಸಿ ಕ್ಯಾಮೆರಾ ಇಟ್ಟ ಘಟನೆ ನಡೆದಿದೆ.
ಮಹಿಳಾ ಉದ್ಯೋಗಿಯೊಬ್ಬರು ವಿಶ್ರಾಂತಿ ಕೊಠಡಿಯ ಬಾತ್ ರೂಂಗೆ ತೆರಳಿದಾಗ ಬಟ್ಟೆಯಿಂದ ಮುಚ್ಚಿದ ಸಿಸಿಟಿವಿ ಕಣ್ಣಿಗೆ ಬಿದ್ದಿದೆ. ತಕ್ಷಣ ಆಕೆ ಮಾಲೀಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಚೇರಿ ಬಂದು ಸಿಸಿಟಿವಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಅದರಲ್ಲಿ ಯಾವುದೇ ಅಶ್ಲೀಲ ವಿಡಿಯೋ ಇರಲಿಲ್ಲ ಎನ್ನಲಾಗಿದೆ.