ಚಿಕ್ಕ ಬಜೆಟ್ ಪ್ರಭಾವಶಾಲಿಯಾಗಿದೆ: ಮಹಿಂದ್ರಾ

ಮಂಗಳವಾರ, 1 ಫೆಬ್ರವರಿ 2022 (15:14 IST)
ನವದೆಹಲಿ : ಕೇಂದ್ರ ಸರ್ಕಾರದ 2022-23ರ ಬಜೆಟ್ನ್ನು ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ಗೆ ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಮೆಚ್ಚುಗೆ ಸೂಚಿಸಿ, ಪ್ರಶಂಸಿ ಟ್ವೀಟ್ ಮಾಡಿದ್ದಾರೆ.

 
ಸಂಕ್ಷಿಪ್ತತೆಯು ಯಾವಾಗಲೂ ಸದ್ಗುಣವಾಗಿದೆ. ನಿರ್ಮಲಾ ಸೀತಾರಾಮನ್ ಅವರ ಚಿಕ್ಕ ಬಜೆಟ್ ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಸಾಬೀತುಪಡಿಸಬಹುದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

 
400 ಹೊಸ ತಲೆಮಾರಿನ ವಂಧೆ ಭಾರತ್ ರೈಲು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆರಿಸುವ ಯೋಜನೆ, ಗ್ರಾಮೀಣ ಮಕ್ಕಳಿಗೆ ವನ್ ಕ್ಲಾಸ್ ವನ್ ಟಿವಿ, ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ, ಜಿಎಸ್ಟಿ ಸಂಗ್ರಹ, 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಕೇಂದ್ರ ಬಜೆಟ್ ಒಳಗೊಂಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ