ಪ್ಲೇಟ್ ನೀಡಲು ಲೇಟ್ ಮಾಡಿದ್ದಕ್ಕೆ ಸಿಬ್ಬಂದಿಯನ್ನೇ ಹೊಡೆದು ಕೊಲೆ!
ಅಡುಗೆ ಸಿಬ್ಬಂದಿ ಸಂದೀಪ್ ಮೃತ ವ್ಯಕ್ತಿ. ದೆಹಲಿಯ ಪ್ರಶಾಂತ್ ವಿಹಾರ್ನಲ್ಲಿ ಈ ಘಟನೆ ನಡೆದಿದೆ. ಡಿಜೆ ಸೇರಿದಂತೆ ಮ್ಯೂಸಿಕ್ ಬ್ಯಾಂಡ್ನ ಸದಸ್ಯರು ಸಂದೀಪ್ ಸಿಂಗ್ ಬಳಿ ಊಟಕ್ಕೆ ಪ್ಲೇಟ್ಗಳನ್ನು ಕೇಳಿದ್ದರು.
ಈ ವೇಳೆ ಸಂದೀಪ್ ಸಿಂಗ್, ಸ್ವಚ್ಛಗೊಳಿಸಲಾಗುತ್ತಿದೆ. ಹಾಗಾಗಿ ಸ್ವಲ್ಪ ಸಮಯದ ನಂತರ ಪ್ಲೇಟ್ಗಳನ್ನು ನೀಡುತ್ತೇವೆ ಎಂದು ಆ ವಾದಕರಿಗೆ ತಿಳಿಸಿದ್ದಾನೆ.
ಪ್ಲೇಟ್ ನೀಡುವುದು ತಡವಾಗಿದ್ದರಿಂದ ಕೋಪಗೊಂಡ ಬ್ಯಾಂಡ್ ಸದಸ್ಯರು ಸಂದೀಪ್ನನ್ನು ಪ್ಲಾಸ್ಟಿಕ್ ಕ್ರೇಟ್ನಿಂದ ಥಳಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಸಂದೀಪನನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.