ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಬರುವಂತೆ ಆತನ ಸಂಬಂಧಿಕರಿಗೆ ಕರೆ ಮಾಡಿದಾಗ ಬರೊಬ್ಬರಿ 17 ಜನ ಯುವತಿಯರು ಬಂದು ಆತನನ್ನು ಮಲಗಿಸಿದ್ದ ಬೆಡ್ ಸುತ್ತ ಬಂದು ನಿಂತೇ ಬಿಟ್ಟರು. ಇದನ್ನು ನೋಡಿ ದಂಗಾಗುವ ಸರದಿ ಆಸ್ಪತ್ರೆಯ ಸಿಬ್ಬಂದಿ ಮತ್ತು ಆತನ ಪೋಷಕರದಾದರೆ, ಈ ಅಪಘಾತ ತನ್ನ ಕಳ್ಳಾಟವನ್ನು ಬಯಲಿಗೆ ತರಲಿದೆ ಎಂಬುದನ್ನು ಕನಸು ಮನಸಲ್ಲೂ ಯೋಚಿಸಿರದ ಯುವಕ 'ಯುಆನ್' ಮಾತ್ರ ದಂಗಾಗಿ ಹೋಗಿದ್ದ.