ಕದ್ದ ಹಣದಿಂದ ದುಬಾರಿ ಕಾರು ಖರೀದಿಸಿ ಸಿಕ್ಕಿಬಿದ್ದ ಕಳ್ಳರು

ಭಾನುವಾರ, 28 ಆಗಸ್ಟ್ 2022 (08:40 IST)
ಜೈಪುರ: ಪಿಕ್ ಪಾಕೆಟ್ ಮಾಡಿ, ದರೋಡೆ ಮಾಡಿ ಸಿಕ್ಕ ಹಣದಿಂದ ಖದೀಮರು ದುಬಾರಿ ಕಾರು ಖರೀದಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.

ಇಬ್ಬರು ಗಂಡ-ಹೆಂಡಿರ ಜೋಡಿ ಸುಮಾರು 300 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿತ್ತು. ಈ ರೀತಿ ಕದ್ದು ಸಂಪಾದಿಸಿದ ಹಣದಿಂದ ದುಬಾರಿ ಎಸ್ ಯುವಿ ಕಾರನ್ನು ಖರೀದಿಸಿ ಸಿಟ್ ರೌಂಡ್ಸ್ ಹಾಕುವಾಗ ಪೊಲೀಸರ ಕೈಗೆ ಸಿಕ್ಕಬಿದಿದ್ದಾರೆ.

ಕಳೆದ 12 ವರ್ಷಗಳಿಂದ ಈ ದಂಪತಿಗಳು ಕಳ್ಳತನ ಕೃತ್ಯ ನಡೆಸುತ್ತಿದ್ದಾರೆ. ಇದೀಗ ಕದ್ದ ಹಣದಿಂದ ಖರೀದಿಸಿದ ಕಾರು ಬಳಸಿಯೂ ದಂಧೆ ಮುಂದುವರಿಸಿದ್ದಾರೆ. ಆದರೆ ಈ ಬಾರಿ ಸಿಸಿಟಿವಿ ದೃಶ್ಯ ಆಧರಿಸಿ ಕಾರಿನ ನಂಬರ್ ಟ್ರೇಸ್ ಮಾಡಿದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ