ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ: ಅಶೋಕ್ ಚೌಧರಿ

ಶನಿವಾರ, 8 ಜುಲೈ 2017 (16:17 IST)
ನರೇಂದ್ರ ಮೋದಿ ಸಾವಿರಾರು ಜನರ ಪ್ರಾಣ ತೆಗೆದು ಪ್ರಧಾನಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರಾಗಿರುವ ಚೌಧರಿ, ಗುಜರಾತ್‌ನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಗಡಿಪಾರು ಮಾಡಲಾಗಿತ್ತು. ಮತ್ತೊಂದೆಡೆ ಸಾವಿರಾರು ಜನರ ಪ್ರಾಣ ತೆಗೆದವರು ಪ್ರದಾನಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕುಮ್ಮಕ್ಕಿನಿಂದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕುಟುಂಬದವರ ಮನೆಯ ಮೇಲೆ ಸಿಬಿಐ ದಾಳಿಗಳನ್ನು ನಡೆಸುತ್ತಿದೆ. ಕಿರುಕುಳ ನೀಡುವ ಉದ್ದೇಶದಿಂದ ಪದೇ ಪದೇ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಕೇಂದ್ರ ಸರಕಾರ ಸೇಡಿನ ರಾಜಕೀಯದ ಉದ್ದೇಶದಿಂದಾಗಿ ಲಾಲು ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ.
 
ಮತ್ತೊಂದೆಡೆ ಲಾಲು ಪುತ್ರಿ ಮೀಸಾ ಭಾರತಿ ನಿವಾಸಗಳ ಮೇಲೆ ಕೂಡಾ ಸಿಬಿಐ ದಾಳಿ ನಡೆಸಿರುವುದು ಲಾಲು ಯಾದವ್ ಮತ್ತು ಕಾಂಗ್ರೆಸ್ ವಲಯಗಳಲ್ಲಿ ತಳಮಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ